ಬೆಂಗಳೂರು : ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು ಇದೀಗ ನಿನ್ನ ಸಹ ಬಿಎಂಟಿಸಿ ಬಸ್ ಯುವತಿಯ ಮೇಲೆ ಹರಿದು ಸ್ಥಳದಲ್ಲಿ ಯುವತಿ ಸಾವನಪ್ಪಿರುವ ಘಟನೆ ವರದಿಯಾಗಿದೆ. ಬೆಂಗಳೂರಿನ ಟಿನ್ ಫ್ಯಾಕ್ಟರಿ ಬಳಿ ಈ ಒಂದು ಘಟನೆ ನಡೆದಿದೆ.
ಹೌದು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಗೆ ಮತ್ತೊಂದು ಮತ್ತೊಂದು ಬಲಿಯಾಗಿದೆ. ಬೈಕ್ ಮೇಲೆ ಹೋಗುತ್ತಿದ್ದವರಿಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ಬ್ಯಾಲೆನ್ಸ್ ತಪ್ಪಿ ಬಸ್ ಚಕ್ರದ ಅಡಿ ಯುವತಿ ಬಿದ್ದಿದ್ದಾಳೆ. ಆಗ ಯುವತಿಯ ತಲೆಯ ಮೇಲೆ ಬಸ್ ಚಕ್ರ ಹರಿದು ಹೋಗಿದೆ. ನಿನ್ನೆ ಬೆಳಿಗ್ಗೆ 9:30 ಸುಮಾರಿಗೆ ಈ ಒಂದು ಘಟನೆ ನಡೆದಿದ್ದು ಮೃತ ಯುವತಿಯನ್ನ ಮಣಿಪುರದ ಹನ್ನಾ ಇನಕ (20) ಎಂದು ತಿಳಿದು ಬಂದಿದೆ








