ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಕಲ್ಯಾಣಿಗೆ ಹಾರಿ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದ ಕನ್ನಡ ಭವನದ ಬಳಿ ನಡೆದಿದೆ. ಆತ್ಮಹತ್ಯೆಯ ಹಿಂದೆ ಸಿ.ಎಸ್ ವಿಕ್ಕಿ ಎನ್ನುವರು ವಂಚನೆ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಚಿಕ್ಕಬಳ್ಳಾಪುರದ ಕನ್ನಡ ಭವನದ ಬಳಿ ಇರುವ ಕಲ್ಯಾಣಿಗೆ ಹಾರಿ ಮಹಿಳೆ ಒಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.ಕಲ್ಯಾಣಿಗೆ ಹಾರಿ ವಿನುತಾ ಎನ್ನುವ ಮಹಿಳೆ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಸಿ ಎಸ್ ವಿಕ್ಕಿ ಎಂಬುವರ ವಿರುದ್ಧ ವಂಚನೆ ಆರೋಪ ಕೇಳಿಬಂದಿದ್ದು, ವಿನತಾ ಪತಿ ಕುಮಾರ್ ಹಾಗು ವಿನುತ ಸೋದರ ವಂಚನೆ ಆರೋಪ ಮಾಡುತ್ತಿದ್ದಾರೆ.ಈ ಬಗ್ಗೆ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.