ಬೆಂಗಳೂರು : ಯುವತಿಯೊಬ್ಬಳು ಪಕ್ಕದ ಮನೆಯ ಹುಡುಗನನ್ನು ಪ್ರೀತಿಸಿದಳು ಈ ವೇಳೆ ಮದುವೆಯಾಗುವಂತೆ ಪ್ರಿಯಕರ ಒತ್ತಾಯಿಸಿದಾಗ ಮನೆಯವರು ಬೇರೆ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿದ್ದಾರೆ.. ಇದರಿಂದ ಪ್ರಿಯಕರ ಯುವತಿಗೆ ಕಿರುಕುಳ ನೀಡಿದ್ದಾನೆ.ಯುವಕನ ಕಿರುಕುಳಕ್ಕೆ ಒಳಗಾಗಿ ನೇಣಿಗೆ ಶರಣಾದ ಘಟನೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಾಸಕರ ‘ಕುದುರೆ ವ್ಯಾಪಾರ’ ನಡೆಸಿದ ಆರೋಪ : ರಾಜ್ಯಸಭೆಯ 5ನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿ ವಿರುದ್ದ ಕೇಸ್
ಬೆಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಗೊಟ್ಟಿಗೆರೆ ಗ್ರಾಮದಲ್ಲಿ ವಾಸವಿದ್ದ ಚಂದ್ರಕಲಾ (19) ನೇಣು ಬಿಗಿದುಕೊಂಡ ಯುವತಿ. ಪಿಯುಸಿ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿಯೇ ಇದ್ದ ಮೃತಳು, ಪಕ್ಕದ ಮನೆಯ ಅರುಣ್ ಕುಮಾರ್‌ಎಂಬಾತನ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದಳು. ಹುಡುಗಿಯ ಮನೆಯವರಿಗೆ ಪ್ರೀತಿಯ ವಿಷಯ ಗೊತ್ತಾಗಿ ಹುಡುಗಿಗೆ ಬುದ್ದಿವಾದ ಹೇಳಿದ್ದರು.
ಉದ್ಯೋವಾರ್ತೆ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 3000 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ!
ಜೈಲಿಗೆ ಹೋಗಿ ಬಂದಿರುವ ಹುಡುಗನ ವ್ಯಕ್ತಿತ್ವ ಸರಿ ಇಲ್ಲ, ಮದುವೆ ಆಗಬೇಡ ಎಂದು ಹುಡುಗಿಯ ಮನವೊಲಿಸಿ ಕನಕಪುರದ ಪರಿಚಿತರ ಸಂಬಂಧದಲ್ಲಿ ಹುಡುಗನನ್ನು ನೋಡಿ ಇತ್ತೀಚೆಗಷ್ಟೇ ಚಂದ್ರಕಲಾಗೆ ನಿಶ್ಚಿತಾರ್ಥ ಮಾಡಿದ್ದರು. ಜಿಗಣೆ ಬಳಿಯ ನಂಜಾಪುರದ ನೆಂಟರ ಮನೆಗೆ ಹೋಗಿದ್ದ ಚಂದ್ರಕಲಾ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸಾಗಿರುವ ‘ಸರ್ಕಾರಿ ನೌಕರ’ರಿಗೆ ಬಿಗ್ ಶಾಕ್: ಇವರಿಗೆ ‘ಪ್ರೋತ್ಸಾಹ ಧನ’ವಿಲ್ಲ
ಮಾಜಿ ಪ್ರಿಯಕರ ಅರುಣ್ ಕುಮಾರ್ ಬೇರೆ ಮದುವೆಯಾದರೆ ಕೊಲ್ಲುವುದಾಗಿ ನಮ್ಮ ಮಗಳಿಗೆ ಬೆದರಿಕೆ ಹಾಕುತ್ತಿದ್ದ, ಮಗಳ ಸಾವಿಗೆ ಆತನೇ ಕಾರಣವೆಂದು ಠಾಣೆಯಲ್ಲಿ ದೂರು ಹುಡುಗಿ ಮನೆಯವರು ನೀಡಿದ್ದಾರೆ. ಜಿಗಣಿ, ಕೋಣನಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.