ಮಂಡ್ಯ : ಸೊಸೈಟಿ ಚುನಾವಣೆಯಲ್ಲೂ ಕೂಡ ಇದೀಗ ರಾಜಕೀಯ ಕೆಸರೆರಚಾಟ ಶುರುವಾಗಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ವೈರತ್ವಕ್ಕೆ ಯುವತಿಯ ಮೇಲೆ ಇದೀಗ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಚೋಳೇನಹಳ್ಳಿ ಗ್ರಾಮದಲ್ಲಿ ಯುವತಿಯ ಮೇಲೆ ಮರಣಾಂತಿಕವಾಗಿ ಹಲ್ಲೆ ನಡೆದಿದೆ.
ಹೌದು ಮಂಡ್ಯದಲ್ಲಿ ಯುವತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಕಾಂಗ್ರೆಸ್ ಗೆ ವೋಟ್ ಹಾಕಿಸಿದ್ದಕ್ಕಾಗಿ ಯುವತಿಯ ಮೇಲೆ ಹಲ್ಲೆ ನಡೆಸಲಾಗಿದೆ. ನಾಗಮಂಗಲ ತಾಲೂಕಿನ ಚೋಳೇನಹಳ್ಳಿ ಈ ಒಂದು ಘಟನೆ ನಡೆದಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ವೈರತ್ವದ ನಡುವೆ ಯುವತಿಯ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ಪರಿಣಾಮ ಯುವತಿಯ ತುಟಿ ಕಟ್ಟಾಗಿದ್ದು, ಹಲ್ಲುಗಳು ಮುರಿದಿದ್ದು ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕಿಸಿದ್ದಕ್ಕೆ ಜೆಡಿಎಸ್ ಪುಂಡರು ಯುವತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಜೆಡಿಎಸ್ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಶಾಂತ್ ಮತ್ತು ಗ್ಯಾಂಗ್ ಗುಂಡಾಗಿರಿ ನಡೆಸಿದೆ. ಪ್ರಶಾಂತ್ ಮತ್ತು ಗ್ಯಾಂಗ್ ನ ಗುಂಡಾಗಿರಿಯಿಂದ ಕುಟುಂಬ ಇದೀಗ ಜೀವ ಭಯದಲ್ಲಿದೆ. ಇದರಿಂದ ಕೇರಳಿದ್ದ ಜೆಡಿಎಸ್ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಶಾಂತ್ ಮತ್ತು ಪ್ರತಾಪ್ ರಾಜು ಪ್ರಮೋದ್ ಮತ್ತು ಹರೀಶ್ ನಿಂದ ಯುವತಿಯ ಮೇಲೆ ಹಲ್ಲೆ ನಡೆದಿದೆ. ಕಾಂಗ್ರೆಸ್ ಗೆ ವೋಟ್ ಹಾಕಿಸಿದ್ದಾರೆ ಎಂದು ಹಲ್ಲೆ ನಡೆಸಿ ದೌರ್ಜನ್ಯ ಎಸಗಲಾಗಿದೆ ಹಲ್ಲೆ ಸಂಬಂಧ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ. ದೂರು ಕೊಟ್ಟಿದ್ದಕ್ಕೆ ರಘು ಮತ್ತು ವಿಕಾಸ್ ಕುಟುಂಬಸ್ಥರ ಮೇಲು ಐವರು ಪುಂಡರು ಹಲ್ಲೆ ನಡೆಸಿದ್ದಾರೆ.