ಬೆಂಗಳೂರು : ಬೆಂಗಳೂರಿನಲ್ಲಿ ಲಿಫ್ಟ್ ನಲ್ಲಿ ನೆಲಕ್ಕೆ ಬಡಿದು ಸಾಕು ನಾಯಿಯನ್ನು ಕೊಂದಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ನಲ್ಲಿ ವಾಕಿಮಗ್ ಕರೆದುಕೊಂಡು ಹೋಗುವಾಗ ಲಿಫ್ಟ್ ನಲ್ಲಿ ಸಾಕಿದ ನಾಯಿಯನ್ನೇ ಕೊಲೆ ಮಾಡಿದ್ದಾರೆ. ಗೂಫಿ ಎಂಬ ನಾಯಿಯನ್ನು ಪುಷ್ಪಲತಾ ಎಂಬ ಮಹಿಳೆ ಕೊಲೆ ಮಾಡಿದ್ದರು. ಇದೀಗ ಪ್ರಕರಣ ಸಂಬಂಧ ಪುಷ್ಪಲತಾಳನ್ನು ಪೊಲೀಸರು ಬಂಧಿಸಿದ್ದಾರೆ.
ಅ.31 ರಂದು ಬಾಗಲೂರಿನ ಅಪಾರ್ಟ್ ಮೆಂಟ್ ನಲ್ಲಿ ಘಟನೆ ನಡೆದಿದೆ. ರಾಶಿ ಎಂಬುವರು ಸಾಕಿದ್ದ ಗೂಫಿ ಎಂಬ ಮುದ್ದಾದ ಶ್ವಾನ, ನಾಯಿ ನೋಡಿಕೊಳ್ಳಲು ಪುಷ್ಪಲತಾರನ್ನು ರಾಶಿ ನೇಮಿಸಿದ್ದರು. ಪುಷ್ಪಲತಾ ವಿರುದ್ಧ ಬಾಗಲೂರು ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.
		







