ಬೆಂಗಳೂರು : ಈ ಹಿಂದೆ ಬೆಂಗಳೂರಿನ ವಿಶ್ವ ವಿದ್ಯಾಲಯದ ಕುಲಸಚಿವರಾಗಿದ್ದ ಪ್ರೊ. ಬಿಸಿ ಮೈಲಾರಪ್ಪ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಪ್ರೊಫೆಸರ್ ಬಿ.ಸಿ ಮೈಲಾರಪ್ಪರನ್ನ ಅರೆಸ್ಟ್ ಮಾಡಿದ್ದಾರೆ.ಈ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮೈಲಾರಪ್ಪ ಕುಲಸಚಿವರಾಗಿದ್ದರು.
ಬಸವೇಶ್ವರನಗರ ಪೊಲೀಸರಿಂದ ಮೈಲಾರಪ್ಪ ಅರೆಸ್ಟ್ ಆಗಿದ್ದಾರೆ. ಲೈಂಗಿಕ ಸಂಪರ್ಕಕ್ಕೆ ಮಹಿಳೆಗೆ ಒತ್ತಾಯ ಮಾಡಿದ ಆರೋಪ ಕೇಳಿ ಬಂದಿದ್ದು, ಅಲ್ಲದೇ ಮನೆ ಬಳಿ ಹೋಗಿ ಬಾಗಿಲು ತೆರೆಯುವಂತೆ ಮೈಲಾರಪ್ಪ ಕಿರುಕುಳ ನೀಡಿದ್ದಾರೆ. ಕರೆ ಮಾಡಿ ಸಹಕರಿಸುವಂತೆ ಒತ್ತಾಯ ಮಾಡಿದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೇಸ್ ದಾಖಲಿಸಿಕೊಂಡು ಪೊಲೀಸರು ಮೈಲಾರಪ್ಪರನ್ನು ಅರೆಸ್ಟ್ ಮಾಡಿದ್ದಾರೆ.
 
		



 




