ಹುಬ್ಬಳ್ಳಿ : ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟಿರಾದಂತಹ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಇದೀಗ ಮುಂಬರುವ ವಿಜಯದಶಮಿಯ ಬಳಿಕ ರಾಜ್ಯದಲ್ಲಿ ಹೊಸ ಪಕ್ಷ ಕಟ್ಟುವ ಪ್ಲಾನ್ ಹಾಕಿಕೊಂಡಿದ್ದಾರೆ. ಈ ಕುರಿತು ಅವರು ಮಾತನಾಡಿ ವಿಜಯದಶಮಿ ವರೆಗೂ ಕಾದು ನೋಡುತ್ತೇನೆ ಬಳಿಕ ಹೊಸ ಪಕ್ಷ ರಚನೆ ಕುರಿತಂತೆ ಪ್ಲಾನ್ ಮಾಡಿದ್ದೇನೆ ಎಂದು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನಲ್ಲ ನನ್ನ ಹೆಣ, ಚಪ್ಪಲಿನೂ ಕಾಂಗ್ರೆಸ್ ಗೆ ಹೋಗಲ್ಲ. ಹೊಸ ಪಕ್ಷದ ಬಗ್ಗೆ ಆಲೋಚನೆ ಇದೆ ಅದು ಅಷ್ಟು ಸುಲಭವಲ್ಲ. ಹಿಂದೂಗಳ ಮತ ವಿಭಜನೆ ಆಗಬಾರದು ಅನ್ನುವುದು ನನ್ನ ಪ್ಲಾನ್. ವಿಜಯದಶಮಿಯವರೆಗೂ ಕಾದು ನೋಡುತ್ತೇನೆ. ನಾನು ಪಕ್ಕಾ ಪ್ಲಾನ್ ಮಾಡಿದ್ದೇನೆ.ರಾಜಕೀಯ ಜೀವನದಲ್ಲಿ ಕೆಲವು ಬಾರಿ ಮಾತು ಮುಳುವಾಗಿದೆ. ಎಂದು ಪರೋಕ್ಷವಾಗಿ ಹೊಸ ಪಕ್ಷದ ಸುಳಿವು ನೀಡಿದ ಶಾಸಕ ಯತ್ನಾಳ್.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಬಿಜೆಪಿಗೆ ಮತ್ತೆ ಕರೆ ತಂದಿದ್ದೆ ನಾನು. ಈ ಹಿಂದೆ ಹೊಸ ಪಕ್ಷ ಕಟ್ಟಿದವರು ಏನಾಗಿದ್ದಾರೆ ಅಂತ ಗೊತ್ತು. ಹೊಸ ಪಕ್ಷ ಕಟ್ಟೋದು ಸುಲಭವಲ್ಲ. ಆದರೆ ನನ್ನ ಅಜೆಂಡ ಬೇರೆ ಇದೆ. ನನ್ನ ತಂದೆ ರಾಮನಗೌಡಗೆ ಹುಟ್ಟಿದ್ದೇನೆ. ಅವರಿಗೆ ತಂದೆ ಎನ್ನುತ್ತೇನೆ. ಯಾರಿಗೂ ಹುಟ್ಟಿ ಯಾರಿಗೂ ತಂದೆ ಎನ್ನುವವನು ನಾನಲ್ಲ ಎಂದು ಗುಡುಗಿದರು.