ಬೆಂಗಳೂರು : ರಾಜ್ಯ ಗುತ್ತಿಗೆದಾರರ ಸಮಾವೇಶಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ವೇಳೆ ಗುತ್ತಿಗೆದಾರರಿಂದ ಐದು ಪೈಸೆ ನಾನು ಲಂಚ ಪಡೆದಿದ್ದರೆ ಇಂದೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
‘ನಿಮ್ಮ ಹಕ್ಕು ಮೀರಿ ನಡೆದುಕೊಂಡಿದ್ದೀರಾ’ : ಸನಾತನ ಧರ್ಮ ಟೀಕಿಸಿದ್ದ ಉದಯನಿಧಿ ಸ್ಟಾಲಿನ್‌ಗೆ ಸುಪ್ರಿಂ ತರಾಟೆ!
ಬೆಂಗಳೂರು ಅರಮನೆ ಮೈದಾನದಲ್ಲಿ ಗುತ್ತಿಗೆದಾರರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗುತ್ತಿಗೆದಾರರು ಬಾಕಿ ಹಣ ಕೊಡಿ ಎಂದು ಬೇಡಿಕೆ ವಿಚಾರವಾಗಿ ಮಾತನಾಡಿ, 1.20,000 ಕೋಟಿ ಒಟ್ಟಿಗೆ ಕೊಡಕ್ ಆಗುತ್ತಾ? ಬಾಕಿ ಬಿಲ್ ಕ್ಲಿಯರ್ ಮಾಡಲು ನಾನೇನು ದುಡ್ಡು ಪ್ರಿಂಟ್ ಮಾಡ್ಲಾ? ನನ್ನಿಂದ ಸುಳ್ಳು ಹೇಳೋಕೆ ಆಗಲ್ಲ ಎಂದು ತಿಳಿಸಿದರು.
ಬಿಜೆಪಿ ಕೊಟ್ಟ ಖಾಸಗಿ ‘FSL’ ವರದಿ ಗಣನೆಗೆ ತೆಗೆದುಕೊಳ್ಳಲ್ಲ : ಗೃಹ ಸಚಿವ ಜಿ.ಪರಮೇಶ್ವರ್
ನಾನು 5 ವರ್ಷ ಹಣಕಾಸಿನ ಮಂತ್ರಿಯಾಗಿದ್ದು, ಈ ಬಾರಿ 15ನೇ ಬಜೆಟ್ ಮಂಡಿಸಿದ್ದೇನೆ. ಯಾವತ್ತಾದರೂ ಕೂಡ LOC ಬಿಡುಗಡೆ ಮಾಡಲಿಕ್ಕೆ 5 ಪೈಸೆ ಗುತ್ತಿಗೆದಾರನ ಹತ್ತಿರ ಲಂಚ ಪಡೆದಿದ್ದರೆ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ. ಇವತ್ತಿನವರೆಗೆ ಎಲ್ ಓ ಸಿ ರಿಲೀಸ್ ಮಾಡೋದಕ್ಕೆ ಐದು ಪೈಸೆ ಪಡೆದಿದ್ದನ್ನು ಯಾರಾದ್ರೂ ಗುತ್ತಿಗೆದಾರ ಬಂದು ಹೇಳಿದರೆ ಇವತ್ತೇ ರಾಜೀನಾಮೆ ನೀಡುತ್ತೇನೆ ಎಂದು ಅವರು ತಿಳಿಸಿದರು.
ದುಡ್ಡು ಏನು ಪ್ರಿಂಟ್ ಮಾಡ್ಲಾ? ಗುತ್ತಿಗೆದಾರರ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಗರಂ!
ಒಂದೇ ಹಂತದಲ್ಲಿ ಬಾಕಿ ಹಣ ಕೊಡೋದಕ್ಕೆ ಆಗುವುದಿಲ್ಲ.ಹಂತ ಹಂತವಾಗಿ ಬಾಕಿ ಬಿಳಿ ಕ್ಲಿಯರ್ ಮಾಡುತ್ತೇವೆ. ಎಷ್ಟು ಸಾಧ್ಯವೊ ಅಷ್ಟು ಹಣ ಕೊಟ್ಟೆ ಕೊಡುತ್ತೇವೆ. ನಮ್ಮ ಸರ್ಕಾರ ಇದ್ದಾಗ ಬಾಕಿ ಬಿಲ್ ಇರಲಿಲ್ಲ ಸರ್ಕಾರ ಗುತ್ತಿಗೆದಾರರ ಪರವಾಗಿದೆ. ಗುತ್ತಿಗೆದಾರರ ಮೇಲಿನ ಆರೋಪದ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಮಂಗಳೂರಲ್ಲಿ ಪಿಯುಸಿ ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ ಕೇಸ್ : ಎಸ್.ಪಿ ರಿಷ್ಯಂತ್ ಹೇಳಿದ್ದೇನು?
ಈ ಹಿಂದೆ ಬಿಜೆಪಿಯವರು ಹಣ ಇಲ್ಲದೆ ಟೆಂಡರ್ ಕರೆದಿದ್ದಾರೆ ಅಲ್ಲದೆ ಬಿಜೆಪಿಯವರು ಹಣ ಬಾಕಿ ಉಳಿಸಿಕೊಂಡಿದ್ದಾರೆ. ಒಂದೇ ಬಾರಿ ಬಾಕಿ ರಿಲೀಸ್ ಮಾಡಿ ಅಂತ ಕೇಳುತ್ತಿದ್ದೀರಿ ನಾನೇನು ದುಡ್ಡು ಪ್ರಿಂಟ್ ಮಾಡ್ಲಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.