ಬೆಂಗಳೂರು : ಜೀವ ಬೆದರಿಕೆ ಹಾಗೂ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ರಾಜ ರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಬಂಧನದ ವಿಚಾರವಾಗಿ ಇದೀಗ ಗುತ್ತಿಗೆದಾರ ಚಲುವರಾಜು ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದು, ನಾಳೆ ಇನ್ನೂ ಎರಡು ಆಡಿಯೋ ರಿಲೀಸ್ ಮಾಡುತ್ತೇನೆ ಎಂದು ಸ್ಫೋಟಕ ಹೇಳಿಕೆ ನೀಡಿದರು.
ಹೌದು ಬೆಂಗಳೂರಿನಲ್ಲಿ ಇಂದು ಮಾತನಾಡಿದ ಚಲುವರಾಜು, ಮುನಿರತ್ನ ಅವರ ಕುರಿತು ಇನ್ನು ಎರಡು ಆಡಿಯೋ ಇವೆ. ನಾಳೆ ಎರಡು ಆಡಿಯೋಗಳನ್ನು ರಿಲೀಸ್ ಮಾಡುತ್ತೇನೆ ಹನುಮಂತರಾಯಪ್ಪ ಜೊತೆ ಮಾತನಾಡಿದ ಆಡಿಯೋ ಹಾಗೂ 30% ಕಮಿಷನ್ ವಿಚಾರದ ಆಡಿಯೋ ಬಿಡುಗಡೆ ಮಾಡುತ್ತೇನೆ ನಾಳೆ ಎರಡು ಆಡಿಯೋಗಳನ್ನು ರಿಲಿಸ್ ಮಾಡುತ್ತೇನೆ ಎಂದು ಚೆಲುವರಾಜು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಈಗಾಗಲೇ ಮುನಿರತ್ನರನ್ನು ಗುತ್ತಿಗೆದಾರ ಚೆಲುವರಾಜನಿಗೆ ಜೀವ ಬೆದರಿಕೆ ಹಾಗೂ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲೆ ಗುತ್ತಿಗೆದಾರ ಚೆಲುವರಾಜು ಮತ್ತೆರಡು ಹೊಸ ಆಡಿಯೋಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದು ಪ್ರಕರಣ ರೋಚಕ ತಿರುವು ಪಡೆದುಕೊಳ್ಳುತ್ತದೆ.