ಬೆಂಗಳೂರು : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಅವಾಚ್ಯ ಪದ ಬಳಕೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆಗೆ ಹಾಜರಾಗುವಂತೆ ಬಿಜೆಪಿ ಎಂಎಲ್ ಸಿ ಸಿ.ಟಿ. ರವಿಗೆ ಸಿಐಡಿ ನೋಟಿಸ್ ನೀಡಿದೆ. ನೋಟಿಸ್ ಗುರುತು ಪ್ರತಿಕ್ರಿಯೆಸಿದ ಅವರು ಸಿಐಡಿನ ನನಗೆ ನೋಟಿಸ್ ಬಂದಿದ್ದು ವಿಚಾರಣೆಗೆ ಹಾಜರಾಗಿ ಸತ್ಯ ಏನಿದೆಯೋ ಅದನ್ನು ಹೇಳುತ್ತೇನೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಐಡಿ ಇಂದ ನನಗೆ ನೋಟಿಸ್ ಬಂದಿದ್ದು ವಿಚಾರಣೆಗೆ ಹಾಜರಾಗಿ ಸತ್ಯ ಏನು ಇದೆಯೋ ಅದನ್ನು ಹೇಳುತ್ತೇನೆ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ ಹೇಳಿಕೆ ನೀಡಿದರು ಸಭಾಪತಿಗಳು ತನಿಖೆ ನಡೆಸಬೇಕು ಎಂದು ಪೊಲೀಸರಿಗೆ ಸೂಚಿಸಿದ್ದರು ಅರುಣ್ ಕಿಶೋರ್ ಕುಮಾರ್ ಕೊಟ್ಟಿದ್ದ ದೂರು ಸಂಬಂಧ ನೋಟಿಸ್ ನೀಡಲಾಗಿತ್ತು. ನಾನು ಊರಿನಲ್ಲಿ ಇಲ್ಲದೆ ಇದ್ದಾಗ ಮೊದಲ ನೋಟೀಸ್ ಬಂದಿತ್ತು ಎಂದರು.
ಇನ್ನು ನಿನ್ನೆ ದಕ್ಷಿಣ ಭಾರತದ ಮೋಸ್ಟ್ ವಾಂಟೆಡ್ 6 ಜನ ನಕ್ಸಲರು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾಗತಿಯಾದ ವಿಚಾರಕ್ಕೆ ಪ್ರತಿಕ್ರಿಸಿದ ಅವರು, ನಕ್ಸಲರ ಶರಣಾಗತಿ ಯಾವ ಕಾರಣಕ್ಕೆ? ಅವರು ಚೀನಾ ಪಾಕಿಸ್ತಾನದ ಸಹಕಾರ ಪಡೆದಿದ್ದಾರೆ. ಅವರನ್ನು ಪೂರ್ಣ ಪ್ರಮಾಣದ ತನಿಖೆಗೆ ಒಳಪಡಿಸಬೇಕು. ನಕ್ಸಲರು ಯಾರೂ ರಾಷ್ಟ್ರದ ಹಿತಕ್ಕಾಗಿ ಕೆಲಸ ಮಾಡಿದವರಲ್ಲ. ಅವರ ಸಿದ್ಧಾಂತ ತಪ್ಪು ಅಂತ ಮನವರಿಕೆಯಾಗಿದ್ದರೆ ಸ್ವಾಗತ ಇದರ ಹಿಂದೆ ಯಾರ್ಯಾರು ಇದ್ದಾರೆ ಎಂದು ಬಹಿರಂಗಪಡಿಸಬೇಕು ಎಂದು ಸಿ ಟಿ ರವಿ ತಿಳಿಸಿದರು.
‘CID’ ಇಂದ ನೋಟಿಸ್
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಅವಾಚ್ಯ ಪದ ಬಳಕೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಧ್ಯಾಹ್ನ 3 ಗಂಟೆಗೆ ವಿಚಾರಣೆಗೆ ಹಾಜರಾಗುಂತೆ ಸಿ.ಟಿ. ರವಿಗೆ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ವೇಳೆ ಡಿ.19ರಂದು ವಿಧಾನಪರಿಷತ್ ಕಲಾಪದ ಸಂದರ್ಭದಲ್ಲಿ ಎಂಎಲ್ ಸಿ ಸಿ.ಟಿ.ರವಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಬಂಧ ಸಿ.ಟಿ.ರವಿ ಬಂಧನವಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ.