ಹಾಸನ : ಹಾಸನದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಪತಿ ಅತ್ತೆಯಿಂದ ಕಿರುಕುಳಕ್ಕೆ ಬೇಸತ್ತ ಪತ್ನಿ ಮಗು ಜೊತೆ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಒಂದುವರೆ ವರ್ಷದ ಹೆಣ್ಣು ಮಗು ಜೊತೆ ಮಹದೇವಿ (29) ಎನ್ನುವವರು ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಅತ್ತೆಯ ಕಿರುಕುಳದ ಬಗ್ಗೆ ವಿಡಿಯೋ ಮಾಡಿ ಮಹದೇವಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಟ್ಟಸೋಗಿ ಗ್ರಾಮದ ಬಳಿಯ ನದಿಯಲ್ಲಿ ಮಹದೇವಿ ಶವ ಪತ್ತೆಯಾಗಿದ್ದು ಇನ್ನೂ ಒಂದುವರೆ ವರ್ಷದ ಹೆಣ್ಣು ಮಗುವಿನ ಮೃತಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿಗಳು ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬೆಟ್ಟಸೋಗೆ ಗ್ರಾಮದ ಮಹಾದೇವಿ ಸಿಬ್ಬಳ್ಳಿ ಗ್ರಾಮದ ಕುಮಾರ್ ಜೊತೆಗೆ ವಿವಾಹ ಆಗಿದ್ದರು. ಮದುವೆಯ ಆದಾಗಿನಿಂದಲೂ ಕೂಡ ಪತ್ನಿ ಮಹದೇವಿ ಮೇಲೆ ಪತಿ ಅನುಮಾನ ಪಡುತ್ತಿದ್ದ.
ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದ. ಕುಮಾರ್ ಕಿರುಕುಳ ತಾಳಲಾರದೆ ಮಹದೇವಿ ತವರು ಮನೆಗೆ ಸೇರಿದ್ದಳು 15 ದಿನಗಳ ಹಿಂದೆ ಪತ್ನಿ ಮಹಾದೇವಿ ತವರುಮನೆ ಸೇರಿದಳು . ಹೀಗಿದ್ದಾಗಲೂ ಕೂಡ ಪತಿ ಕುಮಾರ್ ಫೋನ್ ಮತ್ತು ಮೆಸೇಜ್ ಮೂಲಕ ಕಿರುಕುಳ ನೀಡುತ್ತಿದ್ದ. ನವೆಂಬರ್ 14ರಂದು ಮಾದೇವಿ ಪತಿ ವಿರುದ್ಧ ದೂರು ನೀಡುವುದಾಗಿ ಹೇಳಿದ್ದಾಳೆ.
ಇದೀಗ ವಿಡಿಯೋ ಮಾಡಿ ಪುತ್ರಿ ಜೊತೆ ಮಾದೇವಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಡೆತ್ ನೋಟ್ ಬರೆದಿಟ್ಟು ಮಾದೇವಿ ಮಗುವಿನ ಜೊತೆಗೆ ವಿಡಿಯೋ ಮಾಡಿ ತನ್ನ ಮಗುವಿನ ಜೊತೆಗೆ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಪೊಲೀಸರ ನಿರ್ಲಕ್ಷ್ಯಕ್ಕೆ ಅಕ್ಕನ ಸಾವಿಗೆ ಕಾರಣ ಪತಿಯ ಕಿರುಕುಳದ ವಿರುದ್ಧ ದೂರು ನೀಡಿದರು ಕ್ರಮ ಕೈಗೊಳ್ಳಲಿಲ್ಲ. ದೂರು ನೀಡಲು ಬಂದವರನ್ನು ಹೆದರಿಸಿ ಪೊಲೀಸರು ಕಳುಹಿಸಿದ್ದಾರೆ ಎಂದು ಪೊಲೀಸರ ವಿರುದ್ಧ ಮಾದೇವಿ ಸಹೋದರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಣನೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.








