ಬೀದರ್ : ರಾಜ್ಯದಲ್ಲಿ ಮತ್ತೆ ಮತಾಂತರ ಮುನ್ನೆಲೆಗೆ ಬಂದಿದ್ದು, ಇದೀಗ ಬೀದರ್ ನಲ್ಲಿ ಇಡೀ ರಾಜ್ಯವೇ ಬೆಚ್ಚಿ ಬೆಳಿಸುವಂತಹ ಘಟನೆ ನಡೆದಿದ್ದು, ಮತಾಂತರಕ್ಕೆ ಒಪ್ಪದ ಮೂಗ ತಂದೆಯನ್ನು ಪತ್ನಿ ಹಾಗೂ ಮಕ್ಕಳೇ ಸೇರಿಕೊಂಡು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೀದರ್ ತಾಲೂಕಿನ ರಾಥೋಳಿ ಎಂಬ ಗ್ರಾಮದಲ್ಲಿ ನಡೆದಿದೆ.
ಹೌದು ಪಾಪಿ ಪತ್ನಿ ಹಾಗೂ ದುಷ್ಟ ಉತ್ತರ ಹೇಯ ಕೃತ್ಯಕ್ಕೆ ಬಸವರಾಜ್ ಶೇರಿಕಾರ್ (52) ಬಲಿಯಾಗಿದ್ದಾರೆ.ಮತಾಂತರಕ್ಕೆ ವಿರೋಧ ಮಾಡಿ, ಮನೆಯಲ್ಲಿ ಪೂಜೆ ಪುನಸ್ಕಾರ ಮಾಡಬೇಕೆಂದು ಮೃತ ವ್ಯಕ್ತಿ ಬಸವರಾಜ ಶೇರಿಕರ್ ಹೇಳಿದ್ದರಂತೆ, ಅಷ್ಟೇ ಅಲ್ಲದೇ ದಸರಾ ಹಬ್ಬದಲ್ಲಿ ಪೂಜೆ ಯಾಕೆ ಮಾಡಿಲ್ಲವೆಂದು ಪ್ರಶ್ನಿಸಿದ್ದಕ್ಕೆ ಬಸವರಾಜ್ನನ್ನ ಪತ್ನಿ, ಮಕ್ಕಳು ಸೇರಿಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದರು ಎನ್ನಲಾಗಿದೆ.
ಎಸ್ ಟಿ ಸಮುದಾಯದಲ್ಲಿದ್ದರೂ ಕೂಡ ಬಸವರಾಜ ಪತ್ನಿ ಹಾಗೂ ಮಕ್ಕಳು ಕ್ರಿಶ್ಚಿಯನ್ ಧರ್ಮವನ್ನು ಪಾಲನೆ ಮಾಡುತ್ತಿದ್ದರು. ಇದನ್ನು ಬಸವರಾಜ್ ಅವರಿಗೂ ಪಾಲನೆ ಮಾಡುವಂತೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದನ್ನು ವಿರೋಧಿಸಿದ್ದ ಮಾತು ಬಾರದ ಮೂಗ ಬಸವರಾಜ ಅವರನ್ನು ಪತ್ನಿ ಹಾಗೂ ಮಕ್ಕಳು ಮನೆಯಿಂದ ಹೊರದಬ್ಬಿದ್ದಾರೆ.
ಬಳಿಕ ನಿನ್ನೆ ರಾತ್ರಿ ಮನೆಗೆ ಬಂದಾಗ ಕೈಕಾಲು ಕಟ್ಟಿ ಹಾಕಿ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ಶವವಿಟ್ಟು ಮಗಳು ಅಡುಗೆ ಮಾಡಿದ್ದಾಳೆ ಎನ್ನಲಾಗಿದ್ದು, ಜೊತೆಗೆ ತಂದೆ ಹೆಣವನ್ನು ಮನೆಯಲ್ಲಿ ಇಟ್ಟುಕೊಂಡು ಪಾಪಿ ಮಕ್ಕಳು ಊಟವನ್ನೂ ಮಾಡಿ ಮುಗಿಸಿದ್ದಾರೆ. ಇನ್ನು ಈ ಕುರಿತು ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತಾಯಿ ಮತ್ತು ಮಕ್ಕಳು ಸೇರಿ ನಾಲ್ವರನ್ನ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.