ಬೆಂಗಳೂರು : ಕಳೆದ ಮಾರ್ಚ್ 1ರಂದು ಬೆಂಗಳೂರಿನ ಕುಂದಲಹಳ್ಳಿ ಬಳಿ ಇರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು ಕೆಫೆಯಲ್ಲಿ ಬ್ಲಾಸ್ಟ್ ಕುರಿತಂತೆ ಬಾಂಬರ್ ಯಾರೆಂದು ಪತ್ತೆಯಾಗಿದೆ ಎಂದು ತಿಳಿಸಿದರು.
BREAKING : ಇಂದು ಬೆಂಗಳೂರಿನ ಏರ್ಪೋರ್ಟ್ ನಲ್ಲಿ ನೂತನ ‘ಇಂದಿರಾ ಕ್ಯಾಂಟೀನ್’ ಉದ್ಘಾಟನೆ : ಸಿಎಂ ಡಿಸಿಎಂ ಭಾಗಿ
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದನ್ನು ಕಾಂಫಿರಂ ಮಾಡ್ಕೋಬೇಕು ಎಂದು ತಿಳಿಸಿದರು ಅದನ್ನು ಸಿಸಿಬಿ ಎನ್ ಐ ಎ ಅಧಿಕಾರಿಗಳು ಈಗಾಗಲೇ ಮಾಡುತ್ತಿದ್ದಾರೆ ಬಾಂಬೆ ಬಗ್ಗೆ ಒಳ್ಳೆಯ ಸುಳಿವು ಸಿಕ್ಕಿದೆ ಎಂದು ಬೆಂಗಳೂರಿನಲ್ಲಿ ಜಿ ಪರಮೇಶ್ವರ್ ತಿಳಿಸಿದರು.
ಬೊಲಿವಿಯಾದಲ್ಲಿ ಭೀಕರ ಪ್ರವಾಹ, ಭಾರೀ ಮಳೆಯಿಂದ ತುರ್ತು ಪರಿಸ್ಥಿತಿ ಘೋಷಣೆ
ಆರೋಪಿ ಪತ್ತೆಗಾಗಿ ಬಹಳ ಹತ್ತಿರಕ್ಕೆ ಬಂದಿದ್ದೇವೆ ಬಾಂಬರ್ ಯಾರೆಂದು ಒಂದು ರೀತಿಯಲ್ಲಿ ಪತ್ತೆಯಾಗಿದೆ ಅದನ್ನ ಕನ್ಫರ್ಮ್ ಮಾಡ್ಕೋಬೇಕಾಗಿದೆ ಆ ಕುರಿತಾಗಿ NIA ಹಾಗೂ ನಮ್ಮ CCB ಅವರು ಮಾಡುತ್ತಿದ್ದಾರೆ.ಅವರ ಜೊತೆಯಲ್ಲಿ ಮಾಡುತ್ತಿದ್ದಾರೆ ಆರೋಪಿ ಕುರಿತು ಸುಳಿವು ಸಿಕ್ಕಿದೆ ಎಂದು ತಿಳಿಸಿದರು.
WATCH VIEDO: ಪ್ರಭಾಸ್-ಅಲ್ಲು ಫ್ಯಾನ್ಸ್ ಮಧ್ಯೆ ಹೊಡೆದಾಟ: ವಿಡಿಯೋ ವೈರಲ್
ಕಳೆದ ಮಾರ್ಚ್ ಒಂದರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಘಟನೆಯಿಂದ 10 ಜನಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ತದನಂತರ ಆರೋಪಿಯ ಜಾಡು ಹಿಡಿದ ವಿವಿಧ ಕೇಂದ್ರ ತನಿಖಾ ತಂಡಗಳು ಇದೀಗ ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ತೀವ್ರಕಾರ್ಯಚರಣೆ ನಡೆಸುತ್ತಿದ್ದಾರೆ.