ಚಿಕ್ಕಮಗಳೂರು : ಬೈಕ್ ನಲ್ಲಿ ತೇಳುವಾಗ ಏಕಾಯಕಿ ಚಿರತೆ ದಾಳಿ ಮಾಡಿದೆ ತಕ್ಷಣ ಗ್ರಾಮಸ್ಥರು ಕಲ್ಲಿನಿಂದ ಚಿರತೆಯನ್ನು ಹೊಡೆದು ಓಡಿಸಿ ಇಬ್ಬರು ಬೈಕ್ ಸವಾರರ ಜೀವ ಉಳಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಿದ್ಧರಹಳ್ಳಿ ಬಳಿ ಬೈಕಿನಲ್ಲಿ ತೆರಳುತ್ತಿದ್ದ ಸವಾರರ ಮೇಲೆ ಚಿರತೆ ದಾಳಿ ಮಾಡಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಿದ್ದರಹಳ್ಳಿ ಬಳಿ ಈ ಒಂದು ಘಟನೆ ನಡೆದಿದ್ದು, ಕಲ್ಲಿನಿಂದ ಹೊಡೆದು ಗ್ರಾಮಸ್ಥರು ಬೈಕ್ ಸವಾರರ ಜೀವ ಉಳಿಸಿದ್ದಾರೆ.
ಚಿರತೆ ದಳಯಿಂದ ಮಂಜುನಾಥ್ ಮತ್ತು ಮೂರ್ತಿಗೆ ಗಂಭೀರವಾದ ಗಾಯಗಳಾಗಿವೆ . ಮೊಮ್ಮಗನನ್ನು ಶಾಲೆಗೆ ಬಿಡಲು ಕಡೂರಿಗೆ ತೆರಳುತ್ತಿದ್ದಾಗ ಏಕಾಏಕಿ ದಾಳಿ ಮಾಡಿದೆ. ಮಂಜುನಾಥ್ ಹಾಗೂ ಮೂರ್ತಿ ಮೇಲೆ ಚಿರತೆ ದಾಳಿ ಮಾಡಿದೆ. ತಕ್ಷಣ ಗ್ರಾಮಸ್ಥರು ಕಲ್ಲಿನಿಂದ ಹೊಡೆದು ಸ್ಥಳದಿಂದ ಚಿರತೆಯನ್ನು ಓಡಿಸಿದ್ದಾರೆ. ಸಿದ್ದರಹಳ್ಳಿ ಮದಗದ ಕೆರೆ ಹೆಮ್ಮೆ ದೊಡ್ಡಿ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ ಕಡೂರು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಒಂದು ಘಟನೆ ನಡೆದಿದೆ. ಗಾಯಾಳುಗಳಿಗೆ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.