ಬಾಗಲಕೋಟೆ : ಪ್ರಧಾನಮಂತ್ರಿ ನರೇಂದ್ರ ಮೋದಿ ಬಗ್ಗೆ ವಿವಾದಾತ್ಮಕ ಪೋಸ್ಟ್ ಹಾಕಿದ್ದವನನ್ನು ಇದೀಗ ಅರೆಸ್ಟ್ ಮಾಡಲಾಗಿದೆ. ಮೊಹಮ್ಮದ್ ಅಜೀಜ್ ರೋಣ (27) ಎನ್ನುವ ಆರೋಪಿಯನ್ನು ಬಾಗಲಕೋಟೆ ತಾಲೂಕಿನ ಕಲಾದಗಿ ಪೊಲೀಸ್ರು ಅರೆಸ್ಟ್ ಮಾಡಿದ್ದಾರೆ. ಬಾಗಲಕೋಟೆ ತಾಲೂಕಿನ ಕಲಾದಗಿ ಪಟ್ಟಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಫೋಟೋ ಎಡಿಟ್ ಮಾಡಿ ಅವಹೇಳನಕಾರಿಯಾಗಿ ಆರೋಪಿ ಮೊಹಮ್ಮದ್ ಪೋಸ್ಟ್ ಮಾಡಿದ್ದ. ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಎಡಿಟ್ ಮಾಡಿ ಪೋಸ್ಟ್ ಹಾಕಿದ್ದ. ಮೊಹಮ್ಮದ್ ಅಜೀಜ್ ಪ್ರಧಾನ ಮಂತ್ರಿ ಮೋದಿ ಜೈಲಿನಲ್ಲಿ ಬಂಧಿಸಿದ ರೀತಿಯಲ್ಲಿ ಎಡಿಟ್ ಮಾಡಿದ್ದ.
ಅಷ್ಟೆ ಅಲ್ಲದೇ ಓವೈಸಿ ಪೊಲೀಸ್ ಅಧಿಕಾರಿ ವೇಷದಲ್ಲಿ ಕೂತಿರುವ ರೀತಿ ಎಡಿಟ್ ಮಾಡಿದ್ದ. ಈ ಹಿನ್ನೆಲೆ ಕಲಾದಗಿ ಪೊಲೀಸರು ಆರೋಪಿ ಮೇಲೆ ಸುಮೋಟೋ ಕೇಸ್ ಹಾಕಿ ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿ ಮೊಹಮ್ಮದ್ ಅಜೀಜ್ ಕಲಾದಗಿ ಪಟ್ಟಣದ ನಿವಾಸಿ ಎಂದು ತಿಳಿದು ಬಂದಿದೆ.