ಬೆಂಗಳೂರು : ಕಾಂಗ್ರೆಸ್ ನಾಯಕರು ಸಾಲು ಸಾಲಾಗಿ ಡಿನ್ನರ್ ಪಾರ್ಟಿ ಆಯೋಜನೆ ಮಾಡುತ್ತಿದ್ದಾರೆ ಕಳೆದ ಕೆಲವು ದಿನಗಳ ಹಿಂದೆ ಪಿಡಬ್ಲ್ಯೂಡಿ ಸಚಿವ ಸತೀಶ ಜಾರಕಿಹೊಳಿ ಅವರು ಔತಣಕೂಟ ಏರ್ಪಡಿಸಿದ್ದರು. ಈ ಒಂದು ಔತಣಕೂಟದಲ್ಲಿ ಸಿಎಂ ಸಿದ್ದರಾಮಯ್ಯ ಇವಳು ಸಚಿವರು ಹಾಗೂ 35 ಶಾಸಕರು ಭಾಗಿಯಾಗಿದ್ದರು ಇದೀಗ ನಾಳೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಗ್ರಹ ಸಚಿವ ಜಿ ಪರಮೇಶ್ವರ್ ಅವರು ಕೂಡ ಡಿನ್ನರ್ ಆಯೋಜನೆ ಮಾಡಿದ್ದಾರೆ.
ಇದೇ ವಿಚಾರವಾಗಿ ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ರಾಜ್ಯ ಕಾಂಗ್ರೆಸ್ ನಾಯಕರು ವಿರುದ್ಧ ವಾಗ್ದಾಳಿ ನಡೆಸಿದ್ದು, ಒದ್ದು ಕಿತ್ತು ಕೊಳ್ಳುತ್ತೇನೆ ಅಂತ ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಈ ಡಿನ್ನರ್ ಫೇರ್ವೆಲ್ ಪಾರ್ಟಿ ಇದ್ದಂತೆ. ಮೇಯರ್ ಅವಧಿ ಮುಗಿದ ಮೇಲೆ ಬೀಳ್ಕೊಡುಗೆ ಇಟ್ಟುಕೊಳ್ಳುತ್ತಿದ್ದೇವೆ ಆ ರೀತಿ ಆಗಿದೆ ಇವರ ಡಿನ್ನರ್ ಮೀಟಿಂಗ್ ಎಂದು ಅಶೋಕ್ ವ್ಯಂಗ್ಯವಾಡಿದರು.
ಡಿಕೆ ಶಿವಕುಮಾರ್ ಯಾವಾಗ ಡಿನ್ನರ್ ಹಾಕಿಸುತ್ತಾರೆ ಅವಾಗ ಈ ಸರ್ಕಾರ ಬೀಳುತ್ತದೆ. 20 ಬಾರಿ ನಾನೇ ಮುಖ್ಯಮಂತ್ರಿ ಅಂತ ಸಿಎಂ ಸಿದ್ದರಾಮಯ್ಯ ಹೇಳುತ್ತಾ ತಿರುಗಾಡುತ್ತಿದ್ದಾರೆ. ಮಾಜಿ ಸಿಎಂ ಎಸ್ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದಾಗ ಈ ರೀತಿ ಪದೇಪದೇ ಹೇಳುತ್ತಿರಲಿಲ್ಲ ಎಂದು ಆರ್ ಅಶೋಕ್ ತಿರುಗೇಟು ನೀಡಿದರು.