ಹಾಸನ : ಹಾಸನದಲ್ಲಿ ಚಲಿಸುತ್ತಿದ್ದಂತಹ ಕೆಎಸ್ಆರ್ಟಿಸಿ ಬಸ್ಸಿನ ಚಕ್ರಗಳು ಏಕಾಏಕಿ ಕತ್ತರಿಸಿ ಕಳಚಿ ಬಿದ್ದಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬ್ಯಾದನೆ ಗ್ರಾಮದಲ್ಲಿ ಈ ಒಂದು ಅನಾಹುತ ನಡೆದಿದೆ ಆದರೆ ಚಾಲಕನ ಸಮಯ ಪ್ರಜ್ಞೆಯಿಂದ ಬಸ್ ನಲ್ಲಿ ಇದ್ದಂತಹ ಪ್ರಯಾಣಿಕರು ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಹೌದು ಸಕಲೇಶಪುರ ತಾಲೂಕಿನ ಬ್ಯಾದನೆ ಬಳಿ ಭಾರಿ ಅನಾಹುತ ಒಂದು ತಪ್ಪಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬ್ಯಾದನೆ ಗ್ರಾಮದಲ್ಲಿ ಚಲಿಸುತ್ತಿದ್ದ ಬಸ್ನ ಚಕ್ರಗಳು ಏಕಾಏಕಿ ಕತ್ತರಿಸಿ ಬಿದ್ದಿವೆ. ಸಕಲೇಶಪುರದಿಂದ ಕೆಎಸ್ಆರ್ಟಿಸಿ ಬಸ್ ಬೇಲೂರಿಗೆ ತೆರುಳುತ್ತಿತ್ತು. ಚಕ್ರಗಳು ಕಳಚಿ ಬೀಳುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಅಡ್ಡಾದಿಡ್ಡಿ ಚಲಿಸಿದೆ.
ಕೂಡಲೇ ಚಾಲಕ ಬಸ್ ಅನ್ನು ನಿಲ್ಲಿಸಿ ಪ್ರಯಾಣಿಕರನ್ನು ಪ್ರಾಣಪಾಯದಿಂದ ಪಾರು ಮಾಡಿದ್ದಾನೆ. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಈ ಒಂದು ಭಾರಿ ದುರಂತ ಇದೀಗ ತಪ್ಪಿದೆ. ಘಟನೆ ಕುರಿತಂತೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.