ಬೆಳಗಾವಿ : ಬೆಳಗಾವಿಯ ಸುವರ್ಣ ಸೌಧದಲ್ಲಿ ಕಲಾಪ ಆರಂಭವಾಗಿದ್ದು, ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಸಂಬಂಧಪಟ್ಟಂತೆ ಗಲಾಟೆ ನಡೆಯಿತು. ಇದರ ಮಧ್ಯ ಬೆಳಗಾವಿಯ ಹಿರೇಬಾಗೇವಾಡಿ ಬಳಿ ಪಂಚಮಸಾಲಿ ಹೋರಾಟದ ಸ್ಥಳಕ್ಕೆ ದ್ವಿಚಕ್ರ ವಾಹನದಲ್ಲಿ ಪಂಚಮಸಾಲಿ ಹೋರಾಟ ಸ್ಥಳಕ್ಕೆ ಮಾರಕಾಸ್ತ್ರ ತಂದಿದ್ದು ಪತ್ತೆಯಾಗಿದೆ.
ಹೌದು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್ ಬಳಿ ಹೋರಾಟ ನಡೆಸಲಾಗುತ್ತಿದ್ದು, ಸ್ಕೂಟರ್ ಮೇಲೆ ಇದ್ದಂತಹ ಮಾರಕಾಸ್ತ್ರಗಳನ್ನು ಕಂಡು ಪೊಲೀಸರೆ ಶಾಕ್ ಆಗಿದ್ದಾರೆ. ಪಂಚಮಸಾಲಿ ಹೋರಾಟಕ್ಕೆ ಬಂದವರು ಮಾರಕಾಸ್ತ್ರ ತಂದಿದ್ದರ ಅಥವಾ ಬೇರೆ ಯಾರಾದರೂ ತೆಗೆದುಕೊಂಡು ಹೋಗುತ್ತಿದ್ದೀರಾ ಅಂತ ಪೊಲೀಸರು ಪರಿಶೀಲನೆ ಮಾಡಿಸುತ್ತಿದ್ದಾರೆ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಘಟನೆ ನಡೆದಿದೆ.
 
		



 




