ಚಿತ್ರದುರ್ಗ : ಬಿಜೆಪಿ ಶಾಸಕ ಜನಾರ್ಧನ್ ರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮುಲು ನಡುವೆ ಬಿರುಕು ಉಂಟಾಗಿರುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ನಾನು ಡಿಕೆ ಶಿವಕುಮಾರ್ ಇಲ್ಲೇ ಇದೀವಲ್ಲ ನಮ್ಮಲ್ಲಿ ಎಲ್ಲಿ ಭಿನ್ನಾಭಿಪ್ರಾಯವಿದೆ? ಬಿಜೆಪಿಯಲ್ಲಿ ಒಳಜಗಳದಿಂದ 4-5 ಗುಂಪುಗಳಾಗಿವೆ. ನಮ್ಮಲ್ಲಿ ಒಗ್ಗಟ್ಟಿದೆ ಎಂದು ತಿಳಿಸಿದರು.
ನಿನ್ನೆ ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷ ಒಳಜಗಳದಿಂದಾಗಿ ಒಡೆದ ಮನೆಯಾಗಿದೆ. ಅವರ ಪಕ್ಷದಲ್ಲಿ ನಿತ್ಯ ಒಂದೊಂದು ಹೊಸ ಕಚ್ಚಾಟ ಬೆಳಕಿಗೆ ಬರುತ್ತಿದೆ, ಆದರೆ ನಮ್ಮಲ್ಲಿ ಈ ತರಹದ ಸಮಸ್ಯೆ ಇಲ್ಲ. ನಾವು ಒಗ್ಗಟ್ಟಾಗಿದ್ದೇವೆ. 5 ವರ್ಷಗಳೂ ನಮ್ಮದೇ ಸರ್ಕಾರ ಇರುತ್ತದೆ, 2028ರ ಚುನಾವಣೆಯಲ್ಲಿಯೂ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ವಾಣಿವಿಲಾಸ ಸಾಗರ ಜಲಾಶಯ ಭರ್ತಿಯಾಗಿದ್ದು, ವಾಣಿವಿಲಾಸ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಬಾಗಿನ ಅರ್ಪಿಸಿದರು.ವಾಣಿ ವಿಲಾಸ್ ಸಾಗರ ಜಲಾಶಯ ನಿರ್ಮಾಣವಾದ ದಿನದಿಂದ ಇಲ್ಲಿಗೆ ಮೂರನೇ ಬಾರಿ ಕೂಡಿ ಬಿದ್ದಿದ್ದು ಈ ಹಿನ್ನಲೆಯಲ್ಲಿ ನಿನ್ನೆ ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಿರಿಯೂರು ತಾಲೂಕಿನಲ್ಲಿರುವ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡರೊಂದಿಗೆ ಗಂಗಾ ಮಾತೆಗೆ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.
ವಾಣಿ ವಿಲಾಸ ಸಾಗರ ಕಡೆಗೂ ಕೋಡಿ ಬಿದ್ದಿದ್ದು, ಚಿತ್ರದುರ್ಗ ಜಿಲ್ಲೆಯ ರೈತರು ಫುಲ್ ಖುಷಿಯಾಗಿದ್ದಾರೆ. ಜಲಾಶಯ ನಿರ್ಮಾಣವಾದಾಗಿನಿಂದ ಮೂರು ಬಾರಿ ಭರ್ತಿಯಾಗಿದೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಸೇರಿದಂತೆ ಹಲವು ಕಾಂಗ್ರೆಸ್ ಸಚಿವರು, ಶಾಸಕರು ಸ್ಥಳೀಯ ಮುಖಂಡರು ಕಾರ್ಯಕರ್ತರು ಈ ಒಂದು ಬಾಗಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಬಿಜೆಪಿ ಪಕ್ಷ ಒಳಜಗಳದಿಂದಾಗಿ ಒಡೆದ ಮನೆಯಾಗಿದೆ. ಅವರ ಪಕ್ಷದಲ್ಲಿ ನಿತ್ಯ ಒಂದೊಂದು ಹೊಸ ಕಚ್ಚಾಟ ಬೆಳಕಿಗೆ ಬರುತ್ತಿದೆ, ಆದರೆ ನಮ್ಮಲ್ಲಿ ಈ ತರಹದ ಸಮಸ್ಯೆ ಇಲ್ಲ. ನಾವು ಒಗ್ಗಟ್ಟಾಗಿದ್ದೇವೆ.
5 ವರ್ಷಗಳೂ ನಮ್ಮದೇ ಸರ್ಕಾರ ಇರುತ್ತದೆ, 2028ರ ಚುನಾವಣೆಯಲ್ಲಿಯೂ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ. pic.twitter.com/6LFIrYyucN— Siddaramaiah (@siddaramaiah) January 23, 2025