ಬಿಹಾರ್ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 25 ಪ್ರವಾಸಿಗರು ಮತ್ತು ಕಾಶ್ಮೀರಿ ಕ್ರೂರವಾಗಿ ಸಾವನ್ನಪ್ಪಿದ ಎರಡು ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು ಗುರುತಿಸುತ್ತೇವೆ ಪತ್ತೆಹಚ್ಚುತ್ತೇವೆ ಮತ್ತು ಶಿಕ್ಷಿಸುತ್ತೇವೆ ಮತ್ತು ನಮ್ಮ ಮನೋಭಾವವನ್ನು ಎಂದಿಗೂ ಮುರಿಯುವುದಿಲ್ಲ ಎಂದು ಹೇಳಿದರು.
ಬಿಹಾರದ ಮಧುಬನಿ ಸಮಾವೇಶದಲ್ಲಿ ಮಾತನಾಡಿದ ಅವರು, ಉಗ್ರರನ್ನು ಹುಡುಕಿ ಹುಡುಕಿ ಹೊಡೆಯುತ್ತೇವೆ. ಕನ್ನಡಿಗರು ಸೇರಿದಂತೆ ಎಲ್ಲರನ್ನೂ ಹತ್ಯೆಗೈದಿದ್ದಾರೆ. ಉಗ್ರರು ಊಹಿಸಲಾಗದಂತಹ ಶಿಕ್ಷೆ ಆಗೋದು ನಿಶ್ಚಿತ. ಉಗ್ರರಿಗೆ ಈಗಿರುವ ಸ್ವಲ್ಪ ಜಾಗವು ಇರುವುದಿಲ್ಲ. ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಗುಡುಗಿದ್ದಾರೆ.
ಯಾವುದೇ ಕಾರಣಕ್ಕೂ ನಾವು ಬಿಡುವುದಿಲ್ಲ. ಭಾರತದ ಆತ್ಮ ಸ್ಥೈರ್ಯವನ್ನು ಕುಗ್ಗಿಸಲು ಆಗಲ್ಲ. ಯಾವುದೇ ಕಾರಣಕ್ಕೂ ಉಗ್ರರು ತಪ್ಪಿಸಿಕೊಳ್ಳಲು ಆಗಲ್ಲ ಬಿಹಾರದ ಈ ಮಣ್ಣಿನ ಮೇಲೆ ನಿಂತು ಜಗತ್ತಿಗೆ ಹೇಳುತ್ತಿದ್ದೇನೆ ಭಾರತದ ಪ್ರತಿಯೊಬ್ಬ ಉಗ್ರನನು ಮತ್ತು ಉಗ್ರರಿಗೆ ಬೆಂಬಲಿಸಿದವರನ್ನು ಹುಡುಕಿ ಹೋಗಿ ಹೊಡೆಯುತ್ತೇವೆ ಎಂದರು.
ನಾವು ಅವರನ್ನು ಭೂಮಿಯ ತುದಿಯವರೆಗೆ ಬೆನ್ನಟ್ಟುತ್ತೇವೆ. ಭಾರತದ ಚೈತನ್ಯವನ್ನು ಉಗ್ರವಾದ ಎಂದಿಗೂ ಮುರಿಯಲು ಸಾಧ್ಯವಿಲ್ಲ. ಭಯೋತ್ಪಾದನೆಗೆ ಶಿಕ್ಷೆಯಾಗದೆ ಉಳಿಯುವುದಿಲ್ಲ. ನ್ಯಾಯ ಸಿಗುವಂತೆ ನೋಡಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇವೆ. ಈ ಸಂಕಲ್ಪದಲ್ಲಿ ಇಡೀ ರಾಷ್ಟ್ರವೇ ಒಂದಾಗಿದೆ. ಮಾನವೀಯತೆಯನ್ನು ನಂಬುವ ಪ್ರತಿಯೊಬ್ಬರೂ ನಮ್ಮೊಂದಿಗೆ ಇದ್ದಾರೆ. ನಮ್ಮೊಂದಿಗೆ ನಿಂತ ವಿವಿಧ ದೇಶಗಳ ಜನರು ನಾಯಕರಿಗೆ ಧನ್ಯವಾದ. ಶಿಕ್ಷೆಯು ಮಹತ್ವದ್ದಾಗಿರುತ್ತದೆ ಮತ್ತು ಕಠಿಣವಾಗಿರುತ್ತದೆ ಈ ಭಯೋತ್ಪಾದಕರು ಎಂದಿಗೂ ಯೋಚಿಸಿರಬಾರದು ಎಂದು ಪ್ರಧಾನಿ ಮೋದಿ ಎಚ್ಚರಿಕೆ ನೀಡಿದರು..