ಬೆಂಗಳೂರು : ಬೆಂಗಳೂರಿನ ಶ್ರೀನಿವಾಸಪುರದಲ್ಲಿರುವ ಕೋಗಿಲಿ ಕ್ರಾಸ್ ನಲ್ಲಿ ಮನೆಗಳ ತೆರವು ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕೆ ಮಾಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಡಿಸಿಎಂ ಡಿಕೆ ಶಿವಕುಮಾರ್ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ಹಂಚಿಕೆ ಮಾಡುತ್ತೇವೆ ಎಂದು ಘೋಷಣೆ ಮಾಡಿದರು.
ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೇರಳ ಮುಖ್ಯಮಂತ್ರಿ ವಾಸ್ತವ ವಾರ್ತೆ ಮಾಡಿಕೊಳ್ಳದೆ ಮಾತನಾಡಿದ್ದಾರೆ ಕೆಲವರು ಡಮ್ ಸೈಟ್ ನಲ್ಲಿ ಅಕ್ರಮವಾಗಿ ವಾಸವಾಗಿದ್ದರು. ನಮ್ಮ ಶಾಸಕರು ಮತ್ತು ಅಧಿಕಾರಿಗಳು ಅದನ್ನು ತೆರವು ಮಾಡಿದ್ದಾರೆ. ನಮಗೆ ಬೆಂಗಳೂರು ಬಗ್ಗೆ ಚೆನ್ನಾಗಿ ಗೊತ್ತಿದೆ. ಮನೆ ಕಳೆದುಕೊಂಡವರಿಗೆ ನಾವು ಮನೆ ಹಂಚಿಕೆ ಮಾಡುತ್ತೇವೆ.
ರಾಜೀವ್ ಗಾಂಧಿ ವಸತಿ ನಿಗಮ ಮೂಲಕ ಮನೆ ಹಂಚಿಕೆ ಮಾಡುತ್ತೇವೆ ನಾವು ಬುಲ್ಡೋಜರ್ ಪದ್ಧತಿ ಬಳಸಿಲ್ಲ ಈ ಕುರಿತು ನಮ್ಮ ಪಕ್ಷದ ನಾಯಕರಿಗೂ ಮಾಹಿತಿ ನೀಡಿದ್ದೇವೆ ಅವರು ಇಲ್ಲಿನ ಸ್ಥಿತಿ ತಿಳಿದುಕೊಳ್ಳದೆ ಮಾತನಾಡಲು ಸರಿಯಲ್ಲ ಸರ್ಕಾರಿ ಜಾಗ ಒತ್ತುವರಿ ಮಾಡಲು ಬಿಡಲ್ಲ ಚುನಾವಣೆ ವೇಳೆ ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ ಸರ್ಕಾರಿ ಜಾಗದಲ್ಲಿ ಇಸ್ಲಾಂ ಗಳನ್ನು ಮಾಡಲು ಬಿಡಲ್ಲ ಎಂದು ತಿಳಿಸಿದರು.








