ಪಂಜಾಬ್ : ಆಪರೇಷನ್ ಸಿಂಧೂರ್ ಬಳಿಕ ಇಂದು ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ನ ಆದಂಪುರ ಏರ್ ಬೇಸ್ ಗೆ ಬೇಟಿ ನೀಡಿದ್ದಾರೆ. ಪಂಜಾಬಿನ ಆದಂಪುರ ವಾಯುನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೈನಿಕರನ್ನು ಉದ್ದೇಶಿಸಿ ಭಾಷಣ ಮಾಡಿದರು.
ಆದಂಪುರ ಏರ್ ಬೇಸ್ ನಲ್ಲಿ ಪ್ರಧಾನಿ ಮೋದಿ ಸೈನಿಕರ ಉದ್ದೇಶಿಸಿ ಮಾತನಾಡಿ, ಉಗ್ರರು ನಮ್ಮ ಸಹೋದರಿಯರ ಸಿಂಧೂರವನ್ನು ಅಳಿಸಿದರು. ಸಿಂಧೂರ ಅಳಿಸಿದ್ದ ಉಗ್ರರನ್ನು ಸದೆ ಬಡಿದಿದ್ದೇವೆ. ಉಗ್ರರನ್ನು ಭಾರತೀಯ ಸೇನೆ ಮಣ್ಣಲ್ಲಿ ಹೂತುಹಾಕಿದೆ. ಭಾರತೀಯ ಸೇನೆ ಉಗ್ರ ಹುಟ್ಟಡಗಿಸಿದೆ. ಉಗ್ರ ಪೋಷಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದೇವೆ. ಉಗ್ರರ ಮಹಾವಿನಾಶ ಇಲ್ಲಿಂದ ಆರಂಭವಾಗಿದೆ. ಭಾರತೀಯ ಸೇನೆ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ ಪಾಕಿಸ್ತಾನ ನಡುಕ ಹುಟ್ಟಿಸಿದ್ದೇವೆ.
ಪಾಕಿಸ್ತಾನಕ್ಕೆ ತಿನ್ನುವುದಕ್ಕೆ ಅನ್ನವಿಲ್ಲ ಆದರೆ ಉಗ್ರರನ್ನು ಪೋಷಿಸುತ್ತಿದೆ. 100ಕ್ಕೂ ಹೆಚ್ಚು ಉಗ್ರರನ್ನು ಸದೆ ಬಡಿದಿದ್ದೇವೆ. ಪಾಕಿಸ್ತಾನದ ಒಳಗೆ ನುಗ್ಗಿ ಭಾರತೀಯ ಸೇನಾಪಡೆ ಉಗ್ರರನ್ನು ಹೊಡೆದಿದೆ. ಡ್ರೋನ್ ಮತ್ತು ಜೆಟ್ ವಿಮಾನಗಳನ್ನು ಹೊಡೆದುರಿಸಿಳಿದ್ದೇವೆ. ನಮ್ಮ ವೀರಯೋಧರು ಎಲ್ಲಿ ಪಾದ ಇಡುತ್ತಾರೋ ನಿಮ್ಮ ಪರಾಕ್ರಮವನ್ನು ಇಡೀ ವಿಶ್ವವೇ ನೋಡಿದೆ. ವೀರ ಯೋಧರಿಗೆ ನನ್ನ ಸೆಲ್ಯೂಟ್. ಭಾರತವನ್ನು ಕೆಣಕಿದರೆ ಯಾರಿಗೂ ಉಳಿಗಾಲವಿಲ್ಲ. ಪಾಕಿಸ್ತಾನ ಉಗ್ರರನ್ನು ಪೋಷಣೆ ಮಾಡುತ್ತಿದೆ. 20 ನಿಮಿಷದಲ್ಲಿ ಪಾಕಿಸ್ತಾನ ಗಡಿದಾಟಿ ಹೊಡೆದಿದ್ದೇವೆ. ಪಾಕಿಸ್ತಾನ ಇದನ್ನು ಕೂಡ ಮಾಡಿರಲಿಲ್ಲ. ಭಾರತೀಯ ಸೈನಿಕರ ಶಕ್ತಿಗೆ ಪಾಕಿಸ್ತಾನ ತಬ್ಬಿಬ್ಬುಗೊಂಡಿದೆ. ಉಗ್ರರ ಹೆಡ್ ಕ್ವಾಟರ್ಸ ಮಾಡಲಾಗಿದೆ.
ಆಪರೇಷನ್ ಸಿಂಧೂರ್ ಕೇವಲ ಅಭಿಯಾನ ಅಷ್ಟೇ ಅಲ್ಲ ಅದು ಭಾರತೀಯ ನೀತಿ ಮತ್ತು ನಿಯತ್ತು ಆಗಿದೆ. ನಿಮ್ಮ ಗುರಿಯನ್ನು ತಲುಪಿದ್ದೀರಿ ಎಂದು ಹೆಮ್ಮೆಯಿಂದ ನಾನು ಹೇಳಬಲ್ಲೆ ನಮ್ಮ ಸಹೋದರಿಯರ ಸಿಂಧೂರ ಅಳಿಸಿದವರಿಗೆ ತಕ್ಕ ಪಾಠ ಕಲಿಸಿದ್ದೇವೆ. ಭಯೋತ್ಪಾದಕರ ನೆಲೆಗಳನ್ನು ಮಣ್ಣಿನಲ್ಲಿ ಹೂತುಹಾಕಿದ್ದೇವೆ. ಉಗ್ರರ ಶಿಬಿರ ಮತ್ತು ಪಾಕಿಸ್ತಾನ ವಾಯು ನೆಲೆಗಳು ಮಾತ್ರ ನಾಶವಾಗಲಿಲ್ಲ. ಅವರ ದುಷ್ಟ ವಿನ್ಯಾಸ ಮತ್ತು ಧೈರ್ಯವನ್ನು ಸೋಲಿಸಿದ್ದೇವೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಭಾರತ್ ಮಾತಾ ಕೀ ಅನ್ನೋದು ಉದ್ಘೋಷ ಅಷ್ಟೇ ಅಲ್ಲ. ಇದು ದೇಶದ ಪ್ರತಿಯೊಬ್ಬ ಸೈನಿಕರ ಶಪಥವಾಗಿದೆ. ಇಡೀ ದೇಶದ ನಾಗರೀಕರ ಧ್ವನಿಯಾಗಿದೆ. ಭಾರತ್ ಮಾತಾ ಕೀ ಜೈ ಅನ್ನು ತಾಕತ್ತನ್ನು ಇಡೀ ವಿಶ್ವವೇ ನೋಡಿದೆ. ಅಣ್ವಸ್ತ್ರ ಬಳಕೆ ಬೆದರಿಕೆಗೆ ಭಾರತ ಎಂದಿಗೂ ಜಗ್ಗುವುದಿಲ್ಲ ಎಂದು ಮತ್ತೊಮ್ಮೆ ಮೋದಿ ಪಾಕಿಸ್ತಾನ ವಿರುದ್ಧ ಗುಡುಗಿದರು.
ನಿಮ್ಮ ಶಕ್ತಿಯಿಂದ ಆಪರೇಷನ್ ಸಿಂಧೂರ್ ಯಶಸ್ವಿಯಾಗಿದೆ ಮೂರು ಸೇನಾಪಡೆಗೆ ನಾನು ಸಲ್ಯೂಟ್ ಮಾಡುತ್ತೇನೆ ನಿಮ್ಮ ದರ್ಶನ ಪಡೆಯುವುದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ ನಾವು ಹೊಸ ಇತಿಹಾಸವನ್ನು ರಚಿಸಿದ್ದೇವೆ. ಭಾರತ್ ಮಾತಾ ಕಿ ಜೈ ಎಂದರೆ ಉಗ್ರರಿಗೆ ನಡುಕ ಶುರುವಾಗಿದೆ. ದೇಶದ ಮುಂದಿನ ಪೀಳಿಗೆಗೂ ನೀವು ಪ್ರೇರಣೆಯಾಗಿದ್ದೀರಿ ಎಂದು ಪಂಜಾಬ್ ನ ಆದಮಪುರದಲ್ಲಿ ಸೈನಿಕರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದರು.