ಉತ್ತರಕನ್ನಡ : ವಿದ್ಯಾರ್ಥಿಗಳು ಜಲಪಾತ ವೀಕ್ಷಣೆಗೆ ಎಂದು ಬಂದಾಗ ಚಿಕ್ಕದಾದ ಹಳ್ಳ ದಾಟುತ್ತಿರುವಾಗಲೇ ಏಕಾಏಕಿ ರಭಸವಾಗಿ ನೀರು ಬಂದಿದೆ ಈ ವೇಳೆ ಮೂವರು ವಿದ್ಯಾರ್ಥಿಗಳು ಜಲಪಾತದ ಮದ್ಯ ಸಿಲುಕಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರೆಬೈಲ್ ನಲ್ಲಿ ಈ ಒಂದು ಘಟನೆ ನಡೆದಿದೆ.
ಆರೈಬೈಲ್ ಫಾಲ್ಸ್ ಮಧ್ಯೆ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು ಸದ್ಯ ರಕ್ಷಣೆ ಮಾಡಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸ್ ಸರಿಂದ ಮೂವರನ್ನು ರಕ್ಷಣೆ ಮಾಡಲಾಗಿದೆ. ಹುಬ್ಬಳ್ಳಿಯಿಂದ ಮೆಡಿಕಲ್ ಕಾಲೇಜಿನಿಂದ ವಿದ್ಯಾರ್ಥಿಗಳು ಅರಬೈಲ್ ಜಲಪಾತ ವೀಕ್ಷಣೆಗೆ ಬಂದಿದ್ದರು. ಈ ವೇಳೆ ಚಿಕ್ಕ ಹಳ್ಳ ದಾಟುವಾಗ ಏಕಾಏಕಿ ಜಲಪಾತದ ಮಧ್ಯ ರಭಸವಾಗಿ ನೀರು ಬಂದಿದೆ. ಈ ವೇಳೆ ಮೂವರು ವಿದ್ಯಾರ್ಥಿಗಳು ಜಲಪಾತದ ಮಧ್ಯದಲ್ಲಿ ಸಿಲುಕಿ ಕೊಂಡಿದ್ದಾರೆ.
ತಕ್ಷಣ ಅರಣ್ಯ ಸಿಬ್ಬಂದಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಮೂವರು ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಳೆಗಾಲದಲ್ಲಿ ಇಂತಹ ಜಲಪಾತಗಳಿಗೆ ಭೇಟಿ ಕೊಡುವ ಸಂದರ್ಭದೊಳಗೆ ಆದಷ್ಟು ಮುನ್ನೆಚ್ಚರಿಕೆ ಕ್ರಮವಾಗಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಆದರೂ ಕೂಡ ಯುವಜನತೆ ಇಂತಹ ಹುಚ್ಚಾಟಗಳಲ್ಲಿ ತೊಡಗಿಕೊಂಡು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ.