ರಾಯಚೂರು : ರಾಜ್ಯದಲ್ಲಿ ವಕ್ಫ್ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ನಿನ್ನೆ ವಕ್ಫ್ ಮಂಡಳಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ರೈತರಿಗೆ ನೀಡಿದ ನೋಟಿಸ್ ಗಳನ್ನು ಕೂಡಲೇ ಹಿಂಪಡೆಯಿರಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೆ, ರಾಯಚೂರಲ್ಲಿ ಸ್ಲಂ ಬೋರ್ಡ್ ನಿವೇಶನ ಹಕ್ಕು ವಿತರಣಾ ಕಾರ್ಯಕ್ರಮ ರದ್ದಾಗಿದೆ.
ಹೌದು ರಾಯಚೂರಿನ ಮಸ್ಕಿಯಲ್ಲಿ ಈ ಒಂದು ಕಾರ್ಯಕ್ರಮ ನಡೆಯಬೇಕಿತ್ತು. 263 ಜನರ ನಿವೇಶನ ಹಕ್ಕು ಪತ್ರ ವಿತರಣೆಗೆ ಕಾರ್ಯಕ್ರಮ ನಿಗದಿ ಮಾಡಲಾಗಿತ್ತು. ವಸತಿ ಇಲಾಖೆ ಹಾಗೂ ಸ್ಲಂ ಬೋರ್ಡ್ ಈ ಒಂದು ಸಮಾರಂಭ ಆಯೋಜನೆ ಮಾಡಿತ್ತು. ಸ್ಲಂ ಬೋರ್ಡ್ ಕೆಲವು ನಿವೇಶನಗಳು ವಕ್ಫ್ ಆಸ್ತಿ ಎಂದು ನಮೂದಾಗಿದ್ದರಿಂದ ಸದ್ಯ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
ವಕ್ಫ್ ಆಸ್ತಿ ಅಂತ ನಿವೇಶನ ಹಂಚಿಕೆ ಕಾರ್ಯಕ್ರಮ ರದ್ದಾಗಿದೆ. ಕಾಂಗ್ರೆಸ್ ಶಾಸಕ ಬಸನಗೌಡ ತುರುವಿಹಾಳ ಅಧ್ಯಕ್ಷತೆಯಲ್ಲಿ ಒಂದು ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಇದೀಗ ಕಾರ್ಯಕ್ರಮ ರದ್ದಾಗಿದೆ. ಹಕ್ಕು ಪತ್ರ ವಿತರಣೆಗಾಗಿ ಆಹ್ವಾನ ಪತ್ರಿಕೆ ಇಲಾಖೆಯು ಮುದ್ರಿಸಿತ್ತು. ವಕ್ಫ್ ಆಸ್ತಿ ಎಂಬ ಕಾರಣದಿಂದ ಸಚಿವ ಜಮೀರ್ ಅಹ್ಮದ್ ಕಾರ್ಯಕ್ರಮ ರದ್ದು ಮಾಡಿದ ಆರೋಪ ಕೇಳಿ ಬಂದಿದೆ.