ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಯುವಕ ಆಸ್ತಿ ವಿದ್ವಾದ ವಿಚಾರವಾಗಿ ವಿಜಯಪುರ ಜಿಲ್ಲಾಧಿಕಾರಿಯನ್ನು ಬಿಜೆಪಿ ಮುಖಂಡರ ನಿಯೋಗ ಎಂದು ಭೇಟಿ ಆಯಿತು. ಈ ವೇಳೆ ಬಿಜೆಪಿ ಮುಖಂಡರು ನೀವು ರೈತರ ಅಹವಾಲನ್ನು ಆಲಿಸಿತು. ಈ ವೇಳೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ರೈತರಿಗೆ ನೀಡಿದ ನೋಟಿಸ್ ಹಿಂಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಯ ಸಿಂದಗಿ, ಪಡಗಾನೂರು ಹಡಗಲಿ ಗ್ರಾಮಕ್ಕೆ ಬಿಜೆಪಿ ನಿಯೋಗ ಭೇಟಿ ನೀಡಿತು. ರೈತರಿಂದ ದಾಖಲೆ ಮಾಹಿತಿ ಸಂಗ್ರಹಿಸಿರುವ ಬಿಜೆಪಿ ನಂತರ ಜಿಲ್ಲಾಧಿಕಾರಿ ಭೇಟಿಗೆ ಆಗಮಿಸಿತು. ಡಿಸಿ ಅವರನ್ನು ಭೇಟಿಯಾದ ಸಂಸದ ಗೋವಿಂದ ಕಾರಜೋಳ ನೇತೃತ್ವದ ನಿಯೋಗ ಡಿಸಿಗೆ ಪ್ರೊಸೀಡಿಂಗ್ ಕಾಪಿ ಕೇಳಿದ್ದಾರೆ. ನೋಟಿಸ್ ಕೊಡದೆ ಪಹಣಿಯಲ್ಲಿ ವಕ್ಫ್ ಹೆಸರು ಉಲ್ಲೇಖವಾಗಿದೆ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಜಿಲ್ಲಾಧಿಕಾರಿ ಇಂಡಿ, ಚಡಚಣದಲ್ಲಿ ಮಾತ್ರ 44 ರೈತರ ಜಮೀನಿನಲ್ಲಿ ಇಂದಿಕರಣ ಮಾಡಿದ್ದೇವೆ. ರೈತರಿಗೆ ಕೊಟ್ಟ ನೋಟಿಸ್ ರದ್ದು ಮಾಡಿದ್ದೇವೆ. ರೈತರ ರೈತರಿಗೆ ನೀಡಿದ್ದ ನೋಟಿಸ್ ಈಗಾಗಲೇ ರದ್ದುಗೊಳಿಸಿದ್ದೇವೆ ಎಂದರು. ಜಿಲ್ಲಾಧಿಕಾರಿ ಜೊತೆಗೆ ಬಿಜೆಪಿ ನಿಯೋಗದ ವಕೀಲ ಎಂಬಿ ಜಿರಲಿ ಇದೇ ವೇಳೆ ವಾಗ್ವಾದ ನಡೆಸಿದರು. ಡಿಸಿ ಹಾಗೂ ವಕೀಲ ಜಿರಲಿ ನಡುವೆ ಮಾತಿನ ಚಕುಮತಿ ನಡೆಯಿತು.
ಇಂದೀಕರಣ ಮೊದಲಿನಿಂದಲೂ ಮಾಡುತ್ತಾ. ಹಿಂದಿನಂತೆಯೇ ಈಗ ನಾವು ಇಂದೀಕರಣ ಮಾಡಿದ್ದೇವೆ. 2018-19ರಲ್ಲೂ ವಕ್ಫ್ ಆಸ್ತಿಗಳ ಇಂದೀಕರಣ ಆಗಿವೆ. 123 ಆಸ್ತಿ ಇಂದೀಕರಣ ಆಗಿವೆ. 112 ರೈತರ ಜಮೀನುಗಳಿಗೆ ನೋಟಿಸ್ ನೀಡಲಾಗಿದೆ. ಪ್ರತಿ ವರ್ಷ ಇಂದೀಕರಣ ನೋಟಿಸ್ ಪ್ರಕ್ರಿಯೆ ಆಗುತ್ತಿದೆ. 2020-21 ರಲ್ಲಿ 138 ರೈತರಿಗೆ ನೋಟಿಸ್ ನೀಡದೆ ಇಂದೀಕರಣ ವಕ್ಫ್ ಹೆಸರು ಸೇರ್ಪಡೆಯಾಗಿದೆ.
ಸಾಕಷ್ಟು ರೈತರ ಜಮೀನು ಪಹಣಿಯಲ್ಲಿ ವಕ್ಫ್ ಹೆಸರು ಉಲ್ಲೇಖವಾಗಿದೆ. ಇದು ಕಾನೂನು ಪ್ರಕ್ರಿಯೆ ಎಂದು ಜಿಲ್ಲಾಧಿಕಾರಿ ಟಿ ಭೂಬಾಲನ್ ತಿಳಿಸಿದರು. ಇನ್ನು ಮುಂದೆ ನೋಟಿಸ್ ಇಲ್ಲ. ಕಾಲಂ 11 ಹೆಸರು ಸೇರ್ಪಡೆ ಮಾಡಲ್ಲ. ಈಗ ಮಾಡಿರೋದನ್ನ ವಾಪಸ್ ಪಡೆಯುತ್ತೇವೆ ಆದರೆ ಈ ಹಿಂದೆ ಆಗಿರೋ ಮ್ಯುಟೇಶನ್ ಕುರಿತು ಸರ್ಕಾರದಿಂದ ಸಲಹೆ ಪಡೆದು ಮುಂದಿನ ಕಾರ್ಯ ನಡೆಸಲಾಗುತ್ತದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಭೂ ಬಾಲನ್ ಮಾಹಿತಿ ನೀಡಿದರು.