Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮನಿ ಡಬ್ಲಿಂಗ್ ಕೇಸ್ ನಲ್ಲಿ, ಪೋಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ : ಚಿತ್ರದುರ್ಗ ನಗರ ಸಭೆ ಮಾಜಿ ಸದಸ್ಯ ಅರೆಸ್ಟ್!

15/03/2026 11:07 AM

BIG UPDATE : ಚಿತ್ರದುರ್ಗದಲ್ಲಿ ಕಾರು ಲಾರಿ ಮಧ್ಯ ಭೀಕರ ಅಪಘಾತ : ಮೂವರು ರಿಸರ್ವ್ ಸಬ್ ಇನ್‌ಸ್ಪೆಕ್ಟ‌ರ್ ಸಾವು!

15/03/2026 11:02 AM

BREAKING: ಪಂಚರಾಜ್ಯಗಳ ವಿಧಾನಸಭಾ ಸಮರ: ಇಂದು ಸಂಜೆ ಚುನಾವಣಾ ವೇಳಾಪಟ್ಟಿ ಪ್ರಕಟ !

15/03/2026 11:01 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ವಿಧಾನಪರಿಷತ್‌ 6 ಸ್ಥಾನಗಳಿಗೆ ಮತದಾನ ಆರಂಭ : ಮತದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ
KARNATAKA

BREAKING : ವಿಧಾನಪರಿಷತ್‌ 6 ಸ್ಥಾನಗಳಿಗೆ ಮತದಾನ ಆರಂಭ : ಮತದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ

By kannadanewsnow5703/06/2024 8:01 AM

ಬೆಂಗಳೂರು : ವಿಧಾನಪರಿಷತ್‌ ನ ಮೂರು ಪದವೀಧರ ಹಾಗೂ ಮೂರು ಶಿಕ್ಷಕರ ಕ್ಷೇತ್ರಗಳಿಗೆ ಮತದಾನ ನಡೆಯಲಿದು, ಈಶಾನ್ಯ ಪದವೀಧರ, ಬೆಂಗಳೂರು ಪದವೀಧರ, ನೈಋತ್ಯ ಪದವೀಧರ ಹಾಗೂ ಆಗ್ನೇಯ ಶಿಕ್ಷಕರ, ನೈಋತ್ಯ ಶಿಕ್ಷಕರ, ದಕ್ಷಿಣ ಶಿಕ್ಷಕರ ಕ್ಷೇತ್ರಗಳಿಗೆ ಬೆಳಗ್ಗೆ 8 ಗಂಟೆಯಿಂದ ಮತದಾನ ಆರಂಭವಾಗಿದೆ.

ವಿಧಾನಪರಿಷತ್‌ ನ ಆರು ಕ್ಷೇತ್ರಗಳಿಗೆ ಓರ್ವ ಮಹಿಳೆ ಸೇರಿ ಒಟ್ಟು 78 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್‌ ನ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ, ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಾ.ಧನಂಜಯ ಸರ್ಜಿ, ಣೃತ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್‌, ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಕೆ.ಕೆ. ಮಂಜುನಾಥ್‌, ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೆ. ರಘುಪತಿ ಭಟ್‌, ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ವಿವೇಕಾನಂದ, ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ರುಪ್ಸಾ ಸಂಘಟನೆ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಸ್ಪರ್ಧಿಸಿದ್ದಾರೆ.

ಮತದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಮತದಾನದ ವಿಧಾನ:

1. ಈಶಾನ್ಯ ಕರ್ನಾಟಕ ಪದವೀಧರರ ಕ್ಷೇತ್ರ ಚುನಾವಣೆಲ್ಲಿ ಪ್ರಾಶಸ್ತ್ರ ಮತದಾನ ಮಾಡುವಾಗ ಭಾರತ ಚುನಾವಣಾ ಆಯೋಗದ ಚಿಹ್ನೆ ಹೊಂದಿರುವ Voilet ಬಣ್ಣದ ಸ್ಕೆಚ್ ಪೆನ್ನನ್ನು ಮಾತ್ರ ಬಳಸಬೇಕು

2. ಮತದಾನಕ್ಕಾಗಿ, ಮತಗಟ್ಟೆ ಅಧಿಕಾರಿ ನಿಮಗೆ ಒದಗಿಸಿದ ಸ್ಕೆಚ್ ಪೆನ್ನನ್ನು ಮಾತ್ರ ಬಳಸಿ. ಬೇರೆ ಯಾವುದೇ ಬಣ್ಣದ ಲೇಖನವನ್ನು ಬಳಸಬೇಡಿ.

3. ನಿಮ್ಮ ಮೊದಲ ಪ್ರಾಶಸ್ತ್ರವಾಗಿ ನೀವು ಆಯ್ಕೆ ಮಾಡಿದ ಅಭ್ಯರ್ಥಿಯ ಹೆಸರಿನ ಎದುರು ಒದಗಿಸಲಾದ “ಪ್ರಾಶಸ್ತ್ರ ಕ್ರಮ” ಎಂದು ಗುರುತಿಸಲಾದ ಅಂಕಣದಲ್ಲಿ “1” ಅಂಕಿ ನಮೂದಿಸುವ ಮೂಲಕ ಮತ ಚಲಾಯಿಸಿ. ಈ ಅಂಕಿ ‘1″ ಅನ್ನು ಕೇವಲ ಒಬ್ಬ ಅಭ್ಯರ್ಥಿಯ ಹೆಸರಿನ ಎದುರು ಮಾತ್ರ ಬರೆಯಬೇಕು.

4. ಒಟ್ಟು ಅಭ್ಯರ್ಥಿಗಳ ಸಂಖ್ಯೆಯನ್ನು ಪ್ರಾಶಸ್ತ್ರ ಮತವನ್ನು ಚಲಾಯಿಸುವುದು.

5. ನಿಮ್ಮ ಪ್ರಾಶಸ್ತ್ರ ಕ್ರಮದಲ್ಲಿ ಅಂತಹ ಅಭ್ಯರ್ಥಿಗಳ ಹೆಸರುಗಳ ಎದುರು “ಪ್ರಾಶಸ್ತ್ರದ ಕ್ರಮ” ಎಂದು ಗುರುತಿಸಲಾದ ಕಾಲಂನಲ್ಲಿ, ನಂತರದ ಅಂಕಿಗಳು ಅಂದರೆ 2,3,4 ಇತ್ಯಾದಿಗಳನ್ನು ನಮೂದಿಸುವ ಮೂಲಕ ಉಳಿದ ಅಭ್ಯರ್ಥಿಗಳಿಗೆ ನಿಮ್ಮ ಪ್ರಾಶಸ್ತ್ರಗಳನ್ನು ಮತ ಚಲಾಯಿಸಬಹುದು.

6. ನೀವು ಯಾವುದೇ ಅಭ್ಯರ್ಥಿಯ ಹೆಸರಿನ ಎದುರು ಕೇವಲ ಒಂದು ಅಂಕಿ ಹಾಕಿರುವುದನ್ನು

ಖಚಿತಪಡಿಸಿಕೊಳ್ಳಿ ಮತ್ತು ಒಂದೇ ಅಂಕಿ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳ ಹೆಸರಿನ ಎದುರು

ಹಾಕಿಲ್ಲ ಎಂದು ಖಚಿತಪಡಿಸಿಕೊಳ್ಳಿ. 7. ಪ್ರಾಶಸ್ತ್ರವನ್ನು ಅಂಕಿಗಳಲ್ಲಿ ಮಾತ್ರ ಸೂಚಿಸಬೇಕು, ಅಂದರೆ 1, 2, 3 ಇತ್ಯಾದಿ ಭಾರತೀಯ ಅಂಕಿಗಳ ಅಂತರರಾಷ್ಟ್ರೀಯ ರೂಪದಲ್ಲಿ, ರೋಮನ್ (1, 11, 111, IV) ರೂಪದಲ್ಲಿ ಅಥವಾ ಕನ್ನಡದಲ್ಲಿ (೧, ೨, ೩, ೪) ಗುರುತಿಸಬಹುದು.

8. ನಿಮ್ಮ ಹೆಸರು ಅಥವಾ ಯಾವುದೇ ಪದಗಳನ್ನು ಬರೆಯಬೇಡಿ ಮತ್ತು ಮತಪತ್ರದಲ್ಲಿ ನಿಮ್ಮ ಸಹಿ ಅಥವಾ ಕಿರುಸಹಿ, ಉಪನಾಮ ಇತ್ಯಾದಿಗಳನ್ನು ಹಾಕಬೇಡಿ. ಅಲ್ಲದೆ, ನಿಮ್ಮ ಹೆಬ್ಬೆರಳಿನ ಗುರುತನ್ನು ಹಾಕಬೇಡಿ. ಇವುಗಳು ನಿಮ್ಮ ಮತಪತ್ರವನ್ನು ಅಸಿಂಧುಗೊಳಿಸುತ್ತವೆ.

9. ನಿಮ್ಮ ಪ್ರಾಶಸ್ತ್ರವನ್ನು ಸೂಚಿಸಲು ನಿಮ್ಮ ಆಯ್ಕೆಯ ಅಭ್ಯರ್ಥಿಗಳ ಎದುರು ಯಾವುದೇ ಗುರುತನ್ನು ಅಥವಾ ‘X’ ಅಥವಾ ಟಿಕ್ ‘V’ ಗುರುತನ್ನು ಹಾಕಬೇಡಿ.

10. ನಿಮ್ಮ ಮತಪತ್ರವನ್ನು ಮಾನ್ಯ ಮಾಡಲು, ಯಾವುದಾದರೂ ಒಂದು ಅಭ್ಯರ್ಥಿಯ ಎದುರು ಅಂಕಿ 1 ಅನ್ನು ನಮೂದಿಸುವ ಮೂಲಕ ನಿಮ್ಮ ಮೊದಲ ಪ್ರಾಶಸ್ತ್ರವನ್ನು ಸೂಚಿಸುವುದು ಅವಶ್ಯಕ. ಇತರ ಪ್ರಾಶಸ್ತ್ರಗಳು ಐಚ್ಛಿಕವಾಗಿರುತ್ತವೆ.

ಈ ಕೆಳಗಿನ ಕಾರಣಗಳಿಗೆ ಮತಪತ್ರವು ಅಸಿಂಧುವಾಗುತ್ತದೆ.

1. ಯಾವುದೇ ಅಭ್ಯರ್ಥಿಯ ಎದುರು 1ನೇ ಪ್ರಾಶಸ್ತ್ರವನ್ನು ನಿಯಮಾನುಸಾರ ಗುರುತಿಸದಿರುವುದು.

2. ಒಂದಕ್ಕಿಂತ ಹೆಚ್ಚಿನ ಅಭ್ಯರ್ಥಿಯ ಎದುರು 1ನೇ ಪ್ರಾಶಸ್ತ್ರವನ್ನು ಗುರುತಿಸಿರುವುದು.

3. 1ನೇ ಪ್ರಾಶಸ್ತ್ರವನ್ನು ನಿಗದಿತ ಅಂಕಣದಲ್ಲಿ ಗುರುತಿಸದೆ ಇರುವುದರಿಂದ 1ನೇ ಪ್ರಾಶಸ್ತ್ರವನ್ನು ಯಾವ ಅಭ್ಯರ್ಥಿಗೆ ನೀಡಲು ಉದ್ದೇಶಿಸಲಾಗಿದೆ ಎಂಬುದನ್ನು ನಿಖರವಾಗಿ ಗುರುತಿಸುವುದು ಅಸಾಧ್ಯವಾಗಿರುವುದು.

4. ಅಂಕಿ 1 ಮತ್ತು 2. 3 ಇತ್ಯಾದಿ ಇತರ ಕೆಲವು ಅಂಕಿಗಳನ್ನು ಸಹ ಒಂದೇ ಅಭ್ಯರ್ಥಿಯ ಹೆಸರಿನ ಎದುರು ಗುರುತಿಸಿರುವುದು.

ʻವಿಶೇಷ ಸಾಂದರ್ಭಿಕ ರಜೆʼ ಘೋಷಣೆ ಮಾಡಿ ರಾಜ್ಯ ಸರ್ಕಾರ ಆದೇಶ

ವಿಧಾನಪರಿಷತ್ತಿನ 6 ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ ಸಂದರ್ಭದಲ್ಲಿ ಮತದಾನಕ್ಕೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಜೂನ್.3 ನಾಳೆ ಪದವೀಧರರಿಗೆ, ಶಾಲಾ ಶಿಕ್ಷಕರಿಗೆ ವಿಶೇಷ ರಜೆ ಮಂಜೂರು ಮಾಡಿ ಆದೇಶಿಸಿದೆ.

ಈ ಸಂಬಂಧ ರಾಜ್ಯ ಶಿಷ್ಟಾಚಾರದ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ದಿನಾಂಕ 03-06-2024ರ ಸೋಮವಾರದಂದು ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಅಂದು ವಿಶೇಷ ಸಾಂದರ್ಭಿಕ ರಜೆ ಘೋಷಣೆ ಮಾಡಲಾಗಿದೆ ಅಂತ ತಿಳಿಸಿದ್ದಾರೆ.

ಯಾವ ಯಾವ ಜಿಲ್ಲೆಯ ಪದವೀಧರರು ಹಾಗೂ ಶಿಕ್ಷಕರಿಗೆ ರಜೆ? ಇಲ್ಲಿದೆ ಮಾಹಿತಿ

ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರವ್ಯಾಪ್ತಿಯ ಬೀದರ್, ಗುಲ್ಬರ್ಗ, ರಾಯಚೂರು, ಕೊಪ್ಪಳ, ಬಳ್ಳಾರಿ, ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕು ವ್ಯಾಪ್ತಿಯ ಪದವೀಧರರು, ಶಾಲಾ ಶಿಕ್ಷಕರಿಗೆ ರಜೆ.
ಕರ್ನಾಟಕ ನೈರುತ್ಯ ಪದವೀಧರ ಕ್ಷೇತ್ರ ವ್ಯಾಪ್ತಿಯ ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಚೆನ್ನಗಿರಿ, ಹೊನ್ನಾಳಿ ತಾಲೂಕು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಯ ಪದವೀಧರರು, ಶಿಕ್ಷಕರಿಗೆ ಮತದಾನದ ಮಾಡಲು ರಜೆ ಮಂಜೂರು
ಬೆಂಗಳೂರು ಪದವೀಧರ ಕ್ಷೇತ್ರದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ರಜೆ.
ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಯ ಚಿತ್ರದುರ್ಗ, ದಾವಣಗೆರೆ( ಚೆನ್ನಗಿರಿ, ಹೊನ್ನಾಳಿ, ಹರಪನಹಳ್ಳಿ ತಾಲೂಕುಗಳನ್ನು ಹೊರತುಪಡಿಸಿ) ತುಮಕೂರು ಹಾಗೂ ಕೋಲಾರ ಜಿಲ್ಲೆಯಲ್ಲಿ ಸಾಂದರ್ಭಿಕ ರಜೆ ಘೋಷಣೆ
ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಯ ಶಿವಮೊಗ್ಗ, ದಾವಣೆಗರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ತಾಲೂಕು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕೊಡಗು.
ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ ವ್ಯಾಪ್ತಿಯ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಯ ಪದವೀಧರರು, ಶಿಕ್ಷಕರಿಗೆ ಜೂನ್.3ರಂದು ವಿಶೇಷ ಸಾಂದರ್ಭಿಕ ರಜೆ ಮಂಜೂರು.

BREAKING : ವಿಧಾನಪರಿಷತ್‌ 6 ಸ್ಥಾನಗಳಿಗೆ ಮತದಾನ ಆರಂಭ : ಮತದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ BREAKING: Voting begins for 6 seats of Legislative Council: Here's what you need to know for voters
Share. Facebook Twitter LinkedIn WhatsApp Email

Related Posts

ಮನಿ ಡಬ್ಲಿಂಗ್ ಕೇಸ್ ನಲ್ಲಿ, ಪೋಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ : ಚಿತ್ರದುರ್ಗ ನಗರ ಸಭೆ ಮಾಜಿ ಸದಸ್ಯ ಅರೆಸ್ಟ್!

15/03/2026 11:07 AM1 Min Read

BIG UPDATE : ಚಿತ್ರದುರ್ಗದಲ್ಲಿ ಕಾರು ಲಾರಿ ಮಧ್ಯ ಭೀಕರ ಅಪಘಾತ : ಮೂವರು ರಿಸರ್ವ್ ಸಬ್ ಇನ್‌ಸ್ಪೆಕ್ಟ‌ರ್ ಸಾವು!

15/03/2026 11:02 AM1 Min Read

ಸ್ವಾಮೀಜಿಗಳು ಹೆಜ್ಜೆ ತಪ್ಪುತ್ತಿದ್ದಾರೆ,ಮಠ ದಾರಿ ತಪ್ಪುತ್ತಿದೆ : ಚುಂಚಶ್ರೀಗಳ ವಿರುದ್ದ ನಾಲಿಗೆ ಹರಿಯ ಬಿಟ್ಟ ಕಾಂಗ್ರೆಸ್ ಶಾಸಕ!

15/03/2026 10:47 AM1 Min Read
Recent News

ಮನಿ ಡಬ್ಲಿಂಗ್ ಕೇಸ್ ನಲ್ಲಿ, ಪೋಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ : ಚಿತ್ರದುರ್ಗ ನಗರ ಸಭೆ ಮಾಜಿ ಸದಸ್ಯ ಅರೆಸ್ಟ್!

15/03/2026 11:07 AM

BIG UPDATE : ಚಿತ್ರದುರ್ಗದಲ್ಲಿ ಕಾರು ಲಾರಿ ಮಧ್ಯ ಭೀಕರ ಅಪಘಾತ : ಮೂವರು ರಿಸರ್ವ್ ಸಬ್ ಇನ್‌ಸ್ಪೆಕ್ಟ‌ರ್ ಸಾವು!

15/03/2026 11:02 AM

BREAKING: ಪಂಚರಾಜ್ಯಗಳ ವಿಧಾನಸಭಾ ಸಮರ: ಇಂದು ಸಂಜೆ ಚುನಾವಣಾ ವೇಳಾಪಟ್ಟಿ ಪ್ರಕಟ !

15/03/2026 11:01 AM

ಸ್ವಾಮೀಜಿಗಳು ಹೆಜ್ಜೆ ತಪ್ಪುತ್ತಿದ್ದಾರೆ,ಮಠ ದಾರಿ ತಪ್ಪುತ್ತಿದೆ : ಚುಂಚಶ್ರೀಗಳ ವಿರುದ್ದ ನಾಲಿಗೆ ಹರಿಯ ಬಿಟ್ಟ ಕಾಂಗ್ರೆಸ್ ಶಾಸಕ!

15/03/2026 10:47 AM
State News
KARNATAKA

ಮನಿ ಡಬ್ಲಿಂಗ್ ಕೇಸ್ ನಲ್ಲಿ, ಪೋಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ : ಚಿತ್ರದುರ್ಗ ನಗರ ಸಭೆ ಮಾಜಿ ಸದಸ್ಯ ಅರೆಸ್ಟ್!

By kannadanewsnow0515/03/2026 11:07 AM KARNATAKA 1 Min Read

ಚಿತ್ರದುರ್ಗ : ಮನಿ ಡಬ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ನಗರ ಸಭೆ ಮಾಜಿ ಸದಸ್ಯ ಚಂದ್ರಶೇಖರನನ್ನು ಇದೀಗ ಪೊಲೀಸರು ಅರೆಸ್ಟ್…

BIG UPDATE : ಚಿತ್ರದುರ್ಗದಲ್ಲಿ ಕಾರು ಲಾರಿ ಮಧ್ಯ ಭೀಕರ ಅಪಘಾತ : ಮೂವರು ರಿಸರ್ವ್ ಸಬ್ ಇನ್‌ಸ್ಪೆಕ್ಟ‌ರ್ ಸಾವು!

15/03/2026 11:02 AM

ಸ್ವಾಮೀಜಿಗಳು ಹೆಜ್ಜೆ ತಪ್ಪುತ್ತಿದ್ದಾರೆ,ಮಠ ದಾರಿ ತಪ್ಪುತ್ತಿದೆ : ಚುಂಚಶ್ರೀಗಳ ವಿರುದ್ದ ನಾಲಿಗೆ ಹರಿಯ ಬಿಟ್ಟ ಕಾಂಗ್ರೆಸ್ ಶಾಸಕ!

15/03/2026 10:47 AM

SHOCKING : ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 3,255 ಮಹಿಳೆಯರು ಕಣ್ಮರೆ : ಬೆಂಗಳೂರಲ್ಲೆ ಅತೀ ಹೆಚ್ಚು ಕೇಸ್ ದಾಖಲು!

15/03/2026 10:26 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.