ಕಲಬುರ್ಗಿ : ಆಳಂದ್ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮನೆಯ ಮೇಲೆ ಎಸ್ಐಟಿ ದಾಳಿ ವಿಚಾರಕ್ಕೆ ಸಂಬಂಧಪಟ್ಟಂತೆ, ಗೂಡ್ಸ್ ವಾಹನದಲ್ಲಿ ಮತದಾರರ ದಾಖಲೆಗಳನ್ನು ತಂದು ಸುಟ್ಟು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೀಗ ಗೂಡ್ಸ್ ವಾಹನವನ್ನು ಆಳಂದ ಠಾಣೆ ಪೊಲೀಸ್ರು ಅವಶ್ಯಕ ಪಡೆದುಕೊಂಡಿದ್ದು ಚಾಲಕ ವಿಶಾಲ್ ಪರಾರಿ ಆಗಿದ್ದಾನೆ.
ಮತದಾರರ ದಾಖಲೆ ಬಂಡಲ್ ಗೆ ಬೆಂಕಿ ಹಚ್ಚಿ ನದಿಗೆ ಎಸೆದಿದ್ದ ಚಾಲಕ ಪರಾಗಿದ್ದಾನೆ. ಸದ್ಯ ಗೂಡ್ಸ್ ವಾಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಚಾಲಕ ವಿಶಾಲ್ ಗಾಗಿ ಆಳಂದ ಠಾಣೆ ಪಡಿಸಲು ತೀವ್ರ ಹುಡುಕಾಟ ನಡೆಸಿದ್ದಾರೆ. SIT ಮತಗಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ ಕಲಬುರ್ಗಿ ಜಿಲ್ಲೆಯ ಪೊಲೀಸರು ಎಲ್ಲ ಮಾಹಿತಿ ಸಂಗ್ರಹಿಸಿದ್ದಾರೆ.