ನವದೆಹಲಿ : ಚುನಾವಣಾ ಆಯೋಗಕ್ಕೆ ‘ಮತಗಳ್ಳತನ’ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿದ್ದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚುನಾವಣಾ ಆಯೋಗಕ್ಕೆ ‘ಮತಗಳ್ಳತನ’ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿದ್ದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ರಾಹುಲ್ ಗಾಂಧಿ ಜೊತೆಗೆ, ಪ್ರಿಯಾಂಕಾ ಗಾಂಧಿ ಮತ್ತು ಅಖಿಲೇಶ್ ಯಾದವ್ ಸೇರಿದಂತೆ ಇತರ ವಿರೋಧ ಪಕ್ಷದ ಸಂಸದರನ್ನು ಸಹ ಬಂಧಿಸಲಾಗಿದೆ.
ಮತ ಕಳ್ಳತನದ ಆರೋಪಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ಸಂಸದರು ಚುನಾವಣಾ ಆಯೋಗದ ಕಚೇರಿಯತ್ತ ಮೆರವಣಿಗೆ ನಡೆಸಿದರು. ಪೊಲೀಸರು ಮೆರವಣಿಗೆ ತಡೆದಾಗ, ಎರಡು ಗುಂಪುಗಳ ನಡುವೆ ವಾಗ್ವಾದ ನಡೆಯಿತು. ಆದರೆ, ರಾಹುಲ್ ಗಾಂಧಿ, ಡಿಎಂಕೆ ಸಂಸದೆ ಕನಿಮೊಳಿ ಸೇರಿದಂತೆ ಹಲವರು ಪೊಲೀಸರ ತಡೆಗಳನ್ನು ಮೀರಿ ಮೆರವಣಿಗೆ ಮುಂದುವರಿಸಲು ಪ್ರಯತ್ನಿಸಿದರು. ಈವೇಳೆ, ರಾಹುಲ್, ಪ್ರಿಯಾಂಕಾ, ಕನಿಮೊಳಿ ಸೇರಿದಂತೆ ವಿರೋಧ ಪಕ್ಷದ ಸಂಸದರನ್ನು ಪೊಲೀಸರು ಬಂಧಿಸಿದ್ದಾರೆ.
#WATCH | Lok Sabha LoP Rahul Gandhi and others help TMC MP Mitali Bagh, who fainted during the opposition protest and the resulting detention by the police. pic.twitter.com/5Rpw67O8P2
— ANI (@ANI) August 11, 2025