ಬಾಗಲಕೋಟೆ : ಏಪ್ರಿಲ್ 9 ರಂದು ಉಪಚುನಾವಣೆ ಹಿನ್ನೆಲೆ ಬಾಗಲಕೋಟೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1,39,200 ಹಣವನ್ನ ಜಪ್ತಿ ಮಾಡಿಕೊಳ್ಳಲಾಗಿದೆ.ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 1,39,200 ಹಣವನ್ನು ಸಿಬ್ಬಂದಿಗಳು ಜಪ್ತಿ ಮಾಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಜಾಲಿಹಾಳ ಚೆಕ್ ಪೋಸ್ಟ್ ನಲ್ಲಿ ಪರಿಶೀಲನೆ ವೇಳೆ ಹಣ ಪತ್ತೆಯಾಗಿದೆ. ಸುನೀಲ್ ಹಳಕಟ್ಟಿ ಎಂಬುವವರ ಬಳಿ ಇದ್ದ 64,200 ರೂಪಾಯಿ ಮುಕ್ತಿಯರ ಬೆಪಾರಿ ಎಂಬುವವರ ಬಳಿ ಇದ್ದ 75 ಸಾವಿರ ಹಣ ಜಪ್ತಿ ಮಾಡಿದ್ದಾರೆ. 50 ಸಾವಿರಕಿಂತ ಹೆಚ್ಚಿನ ಹಣ ಸಾಗಿಸಲು ದಾಖಲಾತಿ ಕಡ್ಡಾಯ. ಈ ಹಿನ್ನೆಲೆ ಯಾವುದೇ ದಾಖಲಾತಿ ಇಲ್ಲದಕ್ಕೆ ಹಣ ವಶಕ್ಕೆ ಪಡೆದಿದ್ದಾರೆ.








