ಬೆಂಗಳೂರು : ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಆಗಿರುವಂತಹ ಬಸವರಾಜ್ ಮುತ್ತಗಿ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದು, ಯೋಗೇಶ್ ಗೌಡ ಕೊಲೆ ಮಾಡಿಸಿದ್ದೆ ಶಾಸಕ ವಿನಯ್ ಕುಲಕರ್ಣಿ ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಹೀಗಾಗಿ ಆಪ್ತನ ತಪ್ಪೊಪ್ಪಿಗೆಯಿಂದ ಶಾಸಕ ವಿನಯ್ ಕುಲಕರಣಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.
ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಬಸವರಾಜ್ ಮುತ್ತಗಿ ಹೇಳಿಕೆ ನೀಡಿದ್ದು, ಕೊಲೆ ಪ್ರಕರಣದ ಪ್ರಮುಖ ಆರೋಪಿ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದಾರೆ. ಆಪ್ತನ ತಪೋಪಿಗೆಯಿಂದ ಶಾಸಕ ವಿನಯ್ ಕುಲಕರ್ಣಿಗೆ ಇದೀಗ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಶಾಸಕ ವಿನಯ್ ಕುಲಕರ್ಣಿ ಸೂಚನೆ ಮೇರೆಗೆ ಹಲವರು ಬಂದಿದ್ದರು. ಬೆಂಗಳೂರಿನಿಂದ ಕರೆಸಿದವರಿಂದಲೇ ಯೋಗೇಶ್ ಗೌಡ ಕೊಲೆ ನಡೆದಿದೆ. ತಪ್ಪೋಪ್ಪಿಗೆಯಲ್ಲಿ ವಿನಯ ಪಾತ್ರದ ಕುರಿತು ವಿಸ್ತೃತವಾಗಿ ಬಸವರಾಜ್ ಮುತ್ತಿಗಿ ಮಾಹಿತಿ ನೀಡಿದ್ದಾನೆ. ಮುತ್ತಗಿ ಹೇಳಿಕೆಯಿಂದ ವಿನಯ್ ಕುಲಕರ್ಣಿ ಮೇಲಿನ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗುವ ಸಾಧ್ಯತೆ ಇದೆ.
ಧಾರವಾಡದ ವಿಕಾಸ್ ಕಲಬುರ್ಗಿ, ಕೀರ್ತಿ ಕುಮಾರ್ ಕುರಹಟ್ಟಿ, ವಿಕ್ರಂ, ಸಂದೀಪ್ ಸವದತ್ತಿ ಹಾಗೂ ಮಹಾಬಲೇಶ್ವರನನ್ನು ಭೇಟಿಯಾಗಿದ್ದ ಬಸವರಾಜ್ ಮುತ್ತಗಿ ಅವರ ಮುಂದೆ ವಿನಯ್ ಕುಲಕರ್ಣಿ ವಿಚಾರವನ್ನು ಪ್ರಸ್ತಾಪಿಸಿದ್ದ.ಯೋಗೇಶ್ ಗೌಡನನ್ನು ಕೊಲೆ ಮಾಡಲು ವಿನಯ್ ಕುಲಕರ್ಣಿ ಹೇಳಿದ್ದ ಆದರೆ ಧಾರವಾಡದ ಹುಡುಗರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಬಳಿಕ ಮಾಹಿತಿಯನ್ನು ಬಸವರಾಜ್ ಮುತ್ತಗಿ ವಿನಯ್ ಕುಲಕರ್ಣಿಗೆ ನೀಡಿದ್ದ. ಇದೇ ಕಾರಣಕ್ಕಾಗಿ ವಿನಯ್ ಕುಲಕರ್ಣಿ ಯೋಗೇಶ ಗೌಡನನ್ನು ಕೊಲೆ ಮಾಡಲು ಬೆಂಗಳೂರಿನಿಂದ ಹುಡುಗರನ್ನು ಕರೆಸಿದ್ದ ಅವರನ್ನು ಬಸವರಾಜ್ ಮುತ್ತಗಿಗೆ ವಿನಯ್ ಕುಲಕರ್ಣಿ ಪರಿಚಯ ಮಾಡಿಸಿದ್ದ.ಬೆಂಗಳೂರಿನ 8ನೇ ಆರೋಪಿ ದಿನೇಶ್ ನನ್ನು ಬಸವರಾಜ್ ಮುತ್ತಗಿ ಭೇಟಿಯಾಗಿದ್ದಾನೆ. ವಿನಯ್ ಕುಲಕರ್ಣಿಯ ಪ್ರಸ್ತಾಪವನ್ನು ಆರೋಪಿ ದಿನೇಶ್ ಮುಂದಟ್ಟಿದ್ದ.
ಎರಡು ದಿನಗಳ ಕಾಲಾವಕಾಶ ಕೂಡಿದ್ದ 8ನೇ ಆರೋಪಿ ದಿನೇಶ್. ಬಳಿಕ ಯೋಗೇಶ್ ಹತ್ಯೆಗೆ ಒಪ್ಪಿಗೆ ಸೂಚಿಸಿ 20 ಲಕ್ಷ ಹಣಕ್ಕೆ ದಿನೇಶ್ ಬೇಡಿಕೆ ಇಟ್ಟಿದ್ದ. ಕೊಲೆ ಪ್ರಕರಣದಲ್ಲಿ ತನ್ನ ಹೆಸರು ಬರಬಾರದೆಂದು ದಿನೇಶ್ ಹೇಳಿದ್ದ. ಹತೆಯ ಬಳಿಕ ಧಾರವಾಡದ ಹುಡುಗರನ್ನು ಶರಣಾಗಿಸುವ ಪ್ಲಾನ್ ಮಾಡಲಾಗಿತ್ತು ಎಂದು ಬಸವರಾಜ್ ಮುತ್ತಗಿ ಹೇಳಿಕೆ ದಾಖಲಿಸಿದ್ದಾನೆ.
ಇನ್ನೊಂದು ಕಡೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರಣಿ ಬೇಲ್ ಗಾಗಿ ಅರ್ಜಿ ಸಲ್ಲಿಸಿದ್ದು ಎಂದು ವಿನಯ್ ಕುಲಕರಣಿ ಸಲ್ಲಿಸಿರುವ ಬೆಲ್ ಅರ್ಜಿಯ ಕುರಿತು ವಿಚಾರಣೆ ನಡೆಯಲಿದೆ. ಈ ಸಂದರ್ಭದಲ್ಲಿ ಈ ಒಂದು ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಮುತ್ತಗಿ ಹೇಳಿಕೆ ವಿನಯ್ ಕುಲಕರ್ಣಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.