ಬೀದರ್ : ಕಳೆದ ಕೆಲವು ದಿನಗಳ ಹಿಂದೆ ನಿಗೂಢವಾದ ಸ್ಫೋಟಕ್ಕೆ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದ ಘಟನೆ ಬೀದರ್ನಲ್ಲಿ ನಡೆದಿತ್ತು ಇದೀಗ ಬೀದರ್ ಜಿಲ್ಲೆ ಸೇರಿದಂತೆ ಸುತ್ತಮುತ್ತ ಗ್ರಾಮದಲ್ಲಿ ನಿಗೂಢ ಶುದ್ಧ ಕೇಳಿಸುತ್ತಿದೆ.
ಹೌದು ಬೀದರ್ ಜಿಲ್ಲೆಯ ಡಾಕುಳಗಿ ಗ್ರಾಮದಲ್ಲಿ ಈ ಒಂದು ನಿಗೂಢ ಶಬ್ದ ಕೇಳಿಸುತ್ತಿದ್ದು, ಭೂಮಿಯಿಂದ ಬರುತ್ತಿರುವ ಶಬ್ದದಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಡಾಕುಳಗಿ ಗ್ರಾಮದಲ್ಲಿ ನಿಗೂಢವಾದ ಶಬ್ದ ಕೇಳುತ್ತಿದ್ದು ನಿನ್ನೆ ರಾತ್ರಿ ಸುಮಾರಿಗೆ ಭೂಮಿಯಿಂದ ಈ ಒಂದು ಶಬ್ದ ಕೇಳಿ ಬಂದಿದೆ ಗ್ರಾಮಕ್ಕೆ ಇದೀಗ ತಹಶೀಲ್ದಾರ್ ಅಂಜುಂ ತಬಸ್ಸುಂ ಭೇಟಿ ನೀಡಿದ್ದಾರೆ.








