ಹಾವೇರಿ : 8500 ಲಂಚ ಸ್ವೀಕರಿಸುತ್ತಿದ್ದ ವಿಎ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಹಾವೇರಿ ತಾಲೂಕಿನ ನೆಗಳೂರಿನಲ್ಲಿ ವಿಐ ಫಕ್ಕೀರೆಶ್ ಬಾರ್ಕಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ನೆಗಳೂರಿನ ಕಚೇರಿಯಲ್ಲಿ ಬಸಾಪುರದ ರೈತ ಕರಿಯಲ್ಲಪ್ಪ ಕೆಸರಳ್ಳಿಯಿಂದ ಈತ 8500 ಲಂಚ ಸ್ವೀಕರಿಸಿದ್ದಾನೆ. ಖಾತೆ ಬದಲಾವಣೆ ಮಾಡಿಕೊಡಲು 63,000 ಲಂಚಕ್ಕೆ ಮೊದಲು ಬೇಡಿಕೆ ಇಟ್ಟಿದ್ದ. ಮೊದಲು 30,000 ಲಂಚ ಪಡೆದಿದ್ದ. ಫಕ್ಕೀರೇಶ ಬಾರ್ಕಿ, ಇಂದು 8,500 ಲಂಚ ಪಡೆಯುವಾಗ ಸಿಗಿ ಬಿದ್ದಿದ್ದಾನೆ. ಲೋಕಾಯುಕ್ತ ಸಿಪಿಐ ಶ್ರೀದೇವಿ ಪಾಟೀಲ್ ನೇತ್ರತ್ವದಲ್ಲಿ ಈ ಒಂದು ದಾಳಿ ನಡೆದಿದೆ.








