ವಿಜಯನಗರ : ಮದುವೆಯಾಗಲು ಯಾರೂ ಹೆಣ್ಣು ನೀಡುತ್ತಿಲ್ಲವೆಂದು ಮನನೊಂದ ಅಂಗವಿಕಲ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಮಾಡ್ಲಗೇರಿ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವಕನನ್ನು ಇಮಾಮ್ ಸಾಬ್ (35) ಎಂದು ತಿಳಿದುಬಂದಿದೆ.ಈತ ಪೋಲಿಯೋ ಪೀಡಿತನಾಗಿದ್ದು, ಎಡಗಾಲಿನ ವೈಕಲ್ಯ ಹೊಂದಿದ್ದ. ಪಾಲಕರು ಮದುವೆ ಮಾಡಿಸಲು ಪ್ರಯತ್ನ ನಡೆಸಿದರೂ ಹೆಣ್ಣು ನೀಡಲು ಯಾರೂ ಮುಂದೆ ಬಂದಿಲ್ಲ.ಇದರಿಂದ ಮನನೊಂದು ಕ್ರಿಮಿನಾಶಕ ಸೇವಿಸಿ ಮೃತಪಟ್ಟಿದ್ದಾನೆ.