ಹುಬ್ಬಳ್ಳಿ : ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕಿದೆ. ಯಾರದ್ದೋ ಛತ್ರಿಯ ಅಡಿಗೆ ಹೋಗಿ ನಿಲ್ಲುವುದಕ್ಕೆ ಆಗಲ್ಲ. ಎಲ್ಲೋ ಹೋಗಿ ನಾವು ನಿಲ್ಲುವ ಅವಶ್ಯಕತೆ ಇಲ್ಲ ಪಟ್ಟ ಭದ್ರ ಹಿತಾಸಕ್ತಿಗಳಿಂದ ಸಮಾಜ ಛಿದ್ರವಾಗುತ್ತಿದೆ. ಮಹಾಸಭಾ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರು ತಿಳಿಸಿದರು.
ನೂರಾರು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಸಮುದಾಯ ಅನೇಕ ಪಟ್ಟ ಭದ್ರ ಹಿತಸಕ್ತಿಗಳ ಕೈಯಲ್ಲಿ ಸೇರಿ ನಾವು ಚೂರು ಚೂರಾಗಿ ಹೋಗುತ್ತಿದ್ದೇವೆ. ನಮ್ಮ ಪೂಜ್ಯರು ನಮ್ಮ ಹಿರಿಯರು ಒಗ್ಗಟ್ಟಿನ ಮಂತ್ರ ಹೇಳದೇ ಇದ್ದರೆ ನಮಗೆ ಉಳಿಗಾಲ ಇಲ್ಲ ಅನ್ನೋದನ್ನ ಅರ್ಥೈಸಿಕೊಂಡು ಏಕತಾ ಅಮಾವೇಶವನ್ನು ಮಾಡುತ್ತಿದ್ದಾರೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭೆ ಏನು ನಿರ್ಣಯ ತೆಗೆದುಕೊಳ್ಳುತ್ತದೆ ನಾವು ಎಲ್ಲರೂ ಕೂಡ ಪ್ರಮಾಣ ಪೂರ್ವಕವಾಗಿ ಅವರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿ ಪ್ರಮಾಣ ಮಾಡುತ್ತೇವೆ ಅಂತ ಹೇಳಿದರು.
ಯಾವುದೋ ಧರ್ಮದ ಅಡಿಯಲ್ಲಿ ಯಾರು ಛತ್ರಿ ಹಿಡಿದಾಗ ಅದರ ಕೆಳಗೆ ಹೋಗಿ ನಿಲ್ಲುವುದು ನಮಗೆ ಅವಶ್ಯಕತೆ ಇಲ್ಲ ಏಕೆಂದರೆ ನಾವು ವೀರರುಹುದು ಶೂರರು ಹೌದು ಎಲ್ಲರನ್ನು ಕರೆದುಕೊಂಡು ಹೋಗುವ ಶಕ್ತಿ ಉಳ್ಳವರು ಆದರೆ ಒಂದು ದಿನ ಸಿಡಿದಿದ್ದರೆ ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ ಎನ್ನುವುದನ್ನು ತೋರಿಸುವುದೇ ನಮಗೆ ಗೊತ್ತಿದೆ ಎಂದು ವಿಜಯಾನಂದ ಕಾಶಪ್ಪನವರ್ ಹೇಳಿಕೆ ನೀಡಿದರು.