ಬೆಂಗಳೂರು : ಬೆಳಗಾವಿಯಲ್ಲಿ ಕನ್ನಡಿಗ ಕಂಡಕ್ಟರ್ ಮೇಲೆ ಹಲ್ಲೆಯನ್ನು ಖಂಡಿಸಿ, ಇದೇ ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್ ಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಕರೆ ನೀಡಿದ್ದಾರೆ. ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕನ್ನಡ ಸಂಘಟನೆಗಳ ಸಭೆ ನಡೆದಿದ್ದು ಈ ಒಂದು ಸಭೆಯಲ್ಲಿ ಮಾರ್ಚ್ 22 ರಂದು ಕರ್ನಾಟಕ ಬಂದ್ ಬಹುತೇಕ ಫಿಕ್ಸ್ ಆದಂತಾಗಿದೆ.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾರ್ಚ್ 22ರಂದು ಕರ್ನಾಟಕ ರಾಜ್ಯ ಬಂದ್ ಮಾಡುತ್ತಿದ್ದೇವೆ. ನೆರೆ ರಾಜ್ಯ ಮತ್ತು ಸಂಸತ್ ಗಮನ ಸೆಳೆಯಲು ಬಂದ್ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಹೊಡೆಯುತ್ತಿದ್ದಾರೆ.
ಬಿಹಾರಿಗಳು, ಪಂಜಾಬಿಗಳು, ಬಂಗಾಳದವರು ಹೊಡೆಯುತ್ತಿದ್ದಾರೆ. ಮಹಾರಾಷ್ಟ್ರದವರು ಕನ್ನಡಿಗರ ಮೇಲೆ ಹಲ್ಲೆ ಮಾಡುತ್ತಿದ್ದಾರೆ.
ಬಿಹಾರಿಗಳು ಪಂಜಾಬಿಗಳು ಬಂಗಾಳದವರು ಹೊಡೆಯುತ್ತಿದ್ದಾರೆ. ಮಹಾರಾಷ್ಟ್ರದವರು ಕನ್ನಡಿಗರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ತಮಿಳು ತೆಲುಗು ಮರಾಠಿಗರು ಮಾರ್ವಾಡಿಗಳು, ರಾಜ್ಯದಲ್ಲಿ ವ್ಯವಹಾರ ನಡೆಸಿ ಕೋಟಿ ಕೋಟಿ ರೂಪಾಯಿ ಸಂಪಾದಿಸುತ್ತಿದ್ದಾರೆ. ಪರಭಾಷಿಕರು ಕನ್ನಡ ಭಾಷೆ ಕಲಿಯಲ್ಲ ವ್ಯವಹಾರ ಮಾಡುತ್ತಾರೆ. ಕರ್ನಾಟಕದಲ್ಲಿ ವ್ಯವಹಾರ ಮಾಡಿ ಕೋಟಿ ಕೋಟಿಗೊಳಿಸುತ್ತಿದ್ದಾರೆ. ಇವರು ಕನ್ನಡ ಕಲಿಯಬೇಕು ಇಲ್ಲದಿದ್ದರೆ ಕರ್ನಾಟಕವನ್ನು ತೊರೆಯಲಿ ನಾವು ಚಳವಳಿ ಮಾಡಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.