ರಾಯಚೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಈ ಒಂದು ಪ್ರಕರಣ ತನಿಖೆಯಲ್ಲಿ ಇರುವಾಗಲೇ, ಇದೀಗ ರಾಯಚೂರು ಜಿಲ್ಲೆಯಲ್ಲಿ ಸಹಕಾರ ಇಲಾಖೆಯ ಬ್ಯಾಂಕ್ನಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮಣ ವರ್ಗಾವಣೆ ಪ್ರಕರಣ ಬೆಳಕಿಗೆ ಬಂದಿದೆ.
ಹೌದು RDCC ಯ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಮುದ್ಗಲ್ ಪಟ್ಟಣದ ಶಾಖೆಯ ಬ್ಯಾಂಕ್ ಮ್ಯಾನೇಜರ್ ಸ್ವತಃ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿ ಅಕ್ರಮ ಹಣವನ್ನು ವರ್ಗಾವಣೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.ಒಟ್ಟು 22 ಗ್ರಾಹಕರಿಗೆ 2.20 ಕೋಟಿ ರೂಪಾಯಿ ಆಕ್ರಮ ವರ್ಗಾವಣೆ ಆಗಿರುವ ಆರೋಪ ಕೇಳಿ ಬಂದಿತ್ತು. ಆರೋಪ ಬಂದ ಕೂಡಲೇ ಸ್ವತಃ ಇಲಾಖೆಯೇ ತನಿಖೆ ನಡೆಸಿದ್ದು ಬ್ಯಾಂಕ್ ಮ್ಯಾನೇಜರನ ವಂಚನೆ ಬಯಲಾಗಿದೆ.
ಬ್ಯಾಂಕ್ ಮ್ಯಾನೇಜರ್ ನನ್ನು ಶಿವಪುತ್ರಪ್ಪ ಎಂದು ಹೇಳಲಾಗುತ್ತಿದ್ದು, ಬ್ಯಾಂಕ್ನ 11 ಜನ ಸಿಬ್ಬಂದಿಯ ಐಡಿ ಬಳಸಿ, ನಕಲಿ ಖಾತೆಗಳನ್ನು ಸೃಷ್ಟಿಸಿ ಹಣ ವರ್ಗಾವಣೆಯಾಗಿದ್ದು ಇಲಾಖಾ ತನಿಖೆಯಲ್ಲಿ ಗೊತ್ತಾಗಿದೆ. 2017 ಜೂನ್ನಿಂದ ಸೆಪ್ಟೆಂಬರ್ 2020 ರವರೆಗೂ ಹಂತ ಹಂತವಾಗಿ ಹಣ ವರ್ಗಾವಣೆ ಆಗಿದೆ.ಇತ್ತ ಹಗರಣ ಬೆಳಕಿಗೆ ಬಂದ ಹಿನ್ನೆಲೆ ಮುದಗಲ್ ಶಾಖೆ ಮ್ಯಾನೇಜರ್ ಶಿವಪುತ್ರಪ್ಪರನ್ನ ಅಮಾನತ್ತು ಮಾಡಿ ಆದೇಶಿಸಿಲಾಗಿದೆ.