ಉತ್ತರಕನ್ನಡ : ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಲಾರಿ ಚಾಲಕನ ಸ್ಥಿತಿ ಗಂಭೀರವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಂಚಿನ ಬಾಗಿಲು ಬಳಿ ಈ ಒಂದು ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಎಥೆನಾಲ್ ಗ್ಯಾಸ್ ಸೋರಿಕೆಯಾಗುತ್ತಿದೆ.
ಹಾಗಾಗಿ ಸಾವರರು ಬೇರೆ ಮಾರ್ಗದಲ್ಲಿ ತೆರಳುವಂತೆ ಸೂಚನೆ ನೀಡಲಾಗಿದ್ದು ಗುಜರಾತ್ ನಿಂದ ಉಡುಪಿ ಕಡೆಗೆ ಗ್ಯಾಸ್ ಟ್ಯಾಂಕರ್ ತೆರಳುತ್ತಿತ್ತು. ಇವಳೇ ನಿಯಂತ್ರಣ ಕಳೆದುಕೊಂಡು ಗ್ಯಾಸ್ ಟ್ರಾಕರ್ ಪಲ್ಟಿಯಾಗಿದೆ. ಚಾಲಕ ಅರುಣ ಶೇಕ್ ಉಡುಪಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕಂಚಿನ ಬಾಗಿಲು ಬಳಿ ಈ ಒಂದು ಅಪಘಾತ ಸಂಭವಿಸಿದ್ದು ನಿಷೇಧಾಜ್ಜೆ ಜಾರಿಗೊಳಿಸಿ ಉತ್ತರಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯ ಆದೇಶ ಹೊರಡಿಸಿದ್ದಾರೆ. ಘಟನ ಸ್ಥಳಕ್ಕೆ ತಕ್ಷಣ ಬರುವಂತೆ ಗ್ಯಾಸ್ ಟ್ಯಾಂಕರ್ ತಜ್ಞರಿಗೆ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯ ಸೂಚನೆ ನೀಡಿದ್ದಾರೆ.








