ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (UPSC) 2022ರ ನಾಗರಿಕ ಸೇವಾ ಪರೀಕ್ಷೆಯ ಅರ್ಜಿಯಲ್ಲಿ ಅಕ್ರಮಗಳ ಆರೋಪದ ಮೇಲೆ ವಿವಾದಾತ್ಮಕ ತರಬೇತಿ ಐಎಎಸ್ ಅಧಿಕಾರಿ ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ತಾತ್ಕಾಲಿಕ ಉಮೇದುವಾರಿಕೆಯನ್ನ ರದ್ದುಗೊಳಿಸಿದೆ. ಯುಪಿಎಸ್ಸಿ ನಡೆಸುವ ಯಾವುದೇ ಪರೀಕ್ಷೆಗೆ ಹಾಜರಾಗದಂತೆ ಸಂಸ್ಥೆ ಆಕೆಯನ್ನ ನಿರ್ಬಂಧಿಸಿದೆ.
ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 821ನೇ ರ್ಯಾಂಕ್ ಪಡೆದ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ತನ್ನ ಅಧಿಕಾರವನ್ನ ದುರುಪಯೋಗಪಡಿಸಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅನುಮತಿಸಲಾದ ಮಿತಿಯನ್ನ ಮೀರಿದ ಪ್ರಯತ್ನಗಳನ್ನ ಮೋಸದಿಂದ ಪಡೆಯಲು ಆಕೆ ತನ್ನ ಗುರುತನ್ನ ನಕಲಿ ಮಾಡಿದ ಆರೋಪವೂ ಇದೆ.
ಖೇಡ್ಕರ್ ವಿರುದ್ಧ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಸಲ್ಲಿಸಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
150ಕ್ಕೂ ಹೆಚ್ಚು ರೋಗಗಳಿಗೆ ಇದೊಂದೇ ಔಷಧಿ ; ಈ ‘ಸಸ್ಯ’ದ ಪ್ರಯೋಜನ ತಿಳಿದ್ರೆ ನೀವು ಶಾಕ್ ಆಗ್ತೀರಾ!
BREAKING : ಕಲಬುರ್ಗಿಯಲ್ಲಿ ಭೀಮಾ ನದಿಗೆ ಹಾರಿ ಮಹಿಳೆ ಆತ್ಮಹತ್ಯೆಗೆ ಯತ್ನ : ರಕ್ಷಣೆಗೆ ತೆರಳಿದ ಇಬ್ಬರು ನೀರುಪಾಲು!