ಹಾವೇರಿ : ಕರ್ನಾಟಕದ ಇತಿಹಾಸದಲ್ಲಿ ಶರಣರು, ಸಂತರು ಯಾವುದೇ ಜಾತಿ ಬೇಧವಿಲ್ಲದೆ ಸಮಾಜದಲ್ಲಿನ ಅಸ್ಪೃಶ್ಯತೆ ಯನ್ನು ತೊಡೆದು ಹಾಕುವಲ್ಲಿ ಅನೇಕರು ಹೋರಾಟ ಮಾಡಿದ್ದಾರೆ. ಬಸವಣ್ಣ, ಕನಕದಾಸರು ಸರ್ವಜ್ಞನ ನಾಡಿನಲ್ಲಿ ಅಸ್ಪರ್ಶತೆ ಇನ್ನೂ ಜೀವಂತವಾಗಿದೆ. 21ನೇ ಶತಮಾನದಲ್ಲಿ ಕೂಡ ಸರಕಾರಿ ಶಾಲೆಯಲ್ಲಿ ಅಸ್ಪರ್ಶತೆ ಆಚರಣೆ ಬೆಳಕಿಗೆ ಬಂದಿದೆ.
ಹೌದು ಹಾವೇರಿ ತಾಲೂಕಿನ ದೇವಿ ಹೊಸೂರಿನ ಪ್ರಾಥಮಿಕ ಶಾಲೆಯಲ್ಲಿ ಈ ಒಂದು ಅಸ್ಪೃಶ್ಯತೆ ಆಚರಣೆ ಘಟನೆ ಬೆಳಕಿಗೆ ಬಂದಿದೆ.
ಹಾವೇರಿ ತಾಲೂಕಿನ ದೇವಿ ಹೊಸೂರಿನ ಪ್ರಾಥಮಿಕ ಶಾಲೆಯಲ್ಲಿ ಈ ಒಂದು ಘಟನೆ ನಡೆದಿದೆ. ಪರಿಶಿಷ್ಟ ಜಾತಿ ವಿದ್ಯಾರ್ಥಿಯನ್ನು ಶಿಕ್ಷಕ ಪ್ರತ್ಯೇಕವಾಗಿ ಕೂರಿಸಿದ್ದಾನೆ.ಬೆಂಚ್ ಮೇಲೆ ಕೂರುತ್ತಿದ್ದ ವಿದ್ಯಾರ್ಥಿನಿಯನ್ನು ಶಿಕ್ಷಕ ಕೆಳಗೆ ಕೂಡಿಸಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.
ಶಿಕ್ಷಕನೊಬ್ಬ ಪರಿಶಿಷ್ಟ ಜಾತಿ ವಿದ್ಯಾರ್ಥಿನಿಯನ್ನು ಪ್ರತ್ಯೇಕವಾಗಿ ಕೂರಿಸಿರುವ ಘಟನೆ ವರದಿಯಾಗಿದೆ. ಶಾಲೆಯ ತರಗತಿಯಲ್ಲಿ ಬೆಂಚ್ ಮೇಲೆ ಕೂತಿದ್ದ ವಿದ್ಯಾರ್ಥಿಯನ್ನು ಶಿಕ್ಷಕ ಕೆಳಗೆ ಕೂಡಿಸಿದ್ದಾನೆ.15 ದಿನಗಳಿಂದ ತರಗತಿಯಲ್ಲಿ ಕೆಳಗೆ ಕೂರಿಸಿ ಶಿಕ್ಷಕ ತಾರತಮ್ಯ ಮಾಡಿರುವ ಆರೋಪ ಇದೀಗ ಕೇಳಿಬಂದಿದೆ. ಆದರೆ ವಿದ್ಯಾರ್ಥಿನಿ ಗಲಾಟೆ ಮಾಡುತ್ತಿದ್ದಾಳೆ ಎಂದು ಕೆಳಗೆ ಕೂರಿಸಿದ್ದೇನೆ ಎಂದು ಶಿಕ್ಷಕ ಸ್ಪಷ್ಟನೆ ನೀಡಿದ್ದಾನೆ. ಆದರೆ ವಿದ್ಯಾರ್ಥಿಯ ಪೋಷಕರು ಈ ಕುರಿತು ಮುಖ್ಯೋಪಾಧ್ಯಾಯರಕ್ಕೆ ಗಮನಕ್ಕೆ ತಂದಿದ್ದಾರೆ.
ಆದರೂ ಕೂಡ ತರಗತಿಯಲ್ಲಿ ವಿದ್ಯಾರ್ಥಿನಿಯನ್ನು ಸರ್ಕಾರಿ ಶಾಲೆಯ ಶಿಕ್ಷಕರು ಪ್ರತ್ಯೇಕವಾಗಿ ಕೂರಿಸುತ್ತಿದ್ದರು. ಇದೀಗ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಶಿಕ್ಷಕರ ವಿರುದ್ಧ ಇದೀಗ ಆಕ್ರೋಶ ವ್ಯಕ್ತವಾಗುತ್ತಿದೆ. ವಿದ್ಯಾರ್ಥಿನಿ ಪರಿಶಿಷ್ಟ ಜಾತಿಗೆ ಸೇರಿದವಳು ಎಂಬ ಕಾರಣಕ್ಕೆ ಶೋಷಣೆ ಮಾಡಿರುವ ಆರೋಪ ಕೇಳಿ ಬಂದಿದೆ. ಸರ್ಕಾರಿ ಶಾಲೆಯಲ್ಲಿ ಶೋಷಣೆ ಮಾಡುತ್ತಿದ್ದಾರೆ ಎಂದು ಪೋಷಕರು ಇದೀಗ ಆಕ್ರೋಶ ಹೊರಹಾಕುತ್ತಿದ್ದಾರೆ.
6ನೇ ತರಗತಿ ವಿದ್ಯಾರ್ಥಿನಿಯನ್ನು ಶಿಕ್ಷಕರು ಪ್ರತ್ಯೇಕವಾಗಿ ಕೊಡಿಸುತ್ತಿದ್ದಾರೆ ಎಂದು ಆರೋಪಿಸಿತ್ತಿದ್ದು ವಿದ್ಯಾರ್ಥಿನಿಯ ಪೋಷಕರಾದ ಮಾಲತೇಶ ಹಾಗೂ ಮಮತಾ ಈ ಒಂದು ಗಂಭೀರವಾದ ಆರೋಪ ಮಾಡಿದ್ದಾರೆ. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಗಮನಹರಿಸಬೇಕು ಎಂದು ಒತ್ತಾಯ ಪಡಿಸಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಾರತಮ್ಯ ಸರಿಪಡಿಸುವಂತೆ ಆಗ್ರಹಿಸಿದ್ದಾರೆ.