ಮೈಸೂರು : ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಅಕ್ರಮ ಆರೋಪದ ಕುರಿತಂತೆ KSOU ಕುಲಪತಿ ಪ್ರೊ. ಶರಣಪ್ಪ ವಿ.ಹಲಸೇ ಮತ್ತು ಸಿಬ್ಬಂದಿ ವಿರುದ್ಧ ಗಂಭೀರವಾದ ಆರೋಪ ಕೇಳಿ ಬಂದಿದೆ. KSOU ನಲ್ಲಿ ನಡೆದಂತಹ ಕೋಟ್ಯಾಂತರ ರೂಪಾಯಿಗಳ ಅಕ್ರಮದ ದಾಖಲೆಗಳನ್ನು ಕಾನೂನು ವಿದ್ಯಾರ್ಥಿ ಪುಟ್ಟಸ್ವಾಮಿ ಬಿಡುಗಡೆ ಮಾಡಿದ್ದಾರೆ.
ಕೆಎಸ್ಒಯು ಕಟ್ಟಡದ ವರ್ಚುಯಲ್ ಟೂರ್ಗೆ ಫೋಟೋಗ್ರಾಫಿಕ್ ಬಿಲ್ ಮಾಡಲು 96,91,812 ಬಿಲ್ ಮಾಡಿದ ಆರೋಪ ಕೇಳಿ ಬಂದಿದೆ.ಮೈಸೂರು ಕಟ್ಟಡ ಒಂದಕ್ಕೆ 26,15,000 ಮಾಡಿದ ಆರೋಪ ಕೇಳಿ ಬಂದಿದೆ.ಇನ್ನುಳಿದ 11 ಕಟ್ಟಡಗಳ ಫೋಟೋಗ್ರಾಫಿ ಗೆ ತಲಾ 4 ಲಕ್ಷ ಮತ್ತು 5 ಲಕ್ಷ ಬಿಲ್ ಆಗಿದೆ 20 ರಿಂದ 30 ಸಾವಿರದ ಕೆಲಸಕ್ಕೆ 96 ಲಕ್ಷ ಬಿಲ್ ಮಾಡಿರುವ ಆರೋಪ ಕೇಳಿ ಬಂದಿದೆ. ಕೆಎಸ್ಒಯು ಕಟ್ಟಡಕ್ಕೆ ಎಲ್ಇಡಿ ಬಲ್ಬ್ ಹಾಕಿಸಲು 2 ಕೋಟಿ ಬಿಲ್ ಮಾಡಿರುವ ಆರೋಪ ಕೇಳಿ ಬಂದಿದೆ.
ಇನ್ನು ಕೆಎಸ್ಒಯು ವಸತಿಗೃಹದ ಹಾಸಿಗೆ ದಿಂಬಿಗೆ 15 ಲಕ್ಷ ರೂಪಾಯಿ, ಪುಸ್ತಕ ತುಂಬಿಕೊಂಡು ಹೋಗುವ ಬ್ಯಾಗ್ ಗೆ 60 ಲಕ್ಷ, ವಿವಿಯ ಮಾನಸ ಕಟ್ಟಡದ ಕಿಟಕಿ ಬದಲಾಯಿಸಲು 7 ಕೋಟಿ, 40,000 ಬೆಳೆಯ ಕಂಪ್ಯೂಟರಿಗೆ 97,150 ಕಂಪ್ಯೂಟರ್ ಖರೀದಿ ಮಾಡಲಾಗಿದೆ ಎಂದು ಪುಟ್ಟಸ್ವಾಮಿ ದಾಖಲೆ ಬಿಡುಗಡೆ ಮಾಡಿದ್ದಾರೆ.