ನವದೆಹಲಿ : ಸಾರ್ವಜನಿಕರ ತೀವ್ರ ವಿರೋಧದ ನಡುವೆ ಬಲ್ಡೋಟ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಸ್ಥಾಪನೆಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿದೆ. ರಾಜ್ಯ ಸರ್ಕಾರದ ಶಾಸಕರು ಹಾಗೂ ಸಚಿವರು ಸಹ ಬಲ್ಡೋಟ ಕಾರ್ಖಾನೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ಹೋರಾಟ ನಡಸಿದ್ದರು.ಆದರೆ ಸದ್ಯ ಕೇಂದ್ರ ಪರಿಸರ ಇಲಾಖೆ ಅನುಮತಿ ಪತ್ರ ನೀಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಹೌದು ಬಲ್ಡೊಟಾ ಕಾರ್ಖಾನೆ ಸ್ಥಾಪನೆಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿದ್ದು, ಕೊಪ್ಪಳದಲ್ಲಿ ಸ್ಥಾಪನೆ ಆಗಲಿರುವ ಬಲ್ಡೊಟಾ ಸ್ಟೀಲ್ ಫ್ಯಾಕ್ಟರಿ. ಬಲ್ಡೊಟಾ ಕಾರ್ಖಾನೆಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಖಾನೆ ಸ್ಥಾಪನೆಯ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.ಇದೀಗ ಬಲ್ಡೊಟಾ ಕಾರ್ಖಾನೆ ಸ್ಥಾಪನೆಗೆ ಕೇಂದ್ರ ಪರಿಸರ ಸಚಿವಾಲಯ ಗ್ರೀನ್ ಸಿಗ್ನಲ್ ನೀಡಿದೆ. ಭಾರತದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ವಾರ್ಷಿಕವಾಗಿ 3.5 ಕೋಟಿ ಮೆಟ್ರಿಕ್ ಟನ್ ಉಕ್ಕು ಉತ್ಪಾದನೆಗೆ ಇದೀಗ ಅನುಮತಿ ನೀಡಿದೆ.
ಪರಿಸರ ಇಲಾಖೆ ಅನುಮತಿ ಪಡೆಯುವಲ್ಲಿ ಬಲ್ಡೊಟಾ ಸಮೂಹ ಸಂಸ್ಥೆ ಇದೀಗ ಯಶಸ್ವಿಯಾಗಿದ್ದು, ಮುಂದಿನ ಐದು ವರ್ಷಗಳಲ್ಲಿ 10.5 ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಗುರಿ ಹೊಂದಿದೆ. ಪರಿಸರದ ಮೇಲೆ ಪ್ರಭಾವ ಬೀರುವಂತಹ ವಿಷಯಗಳ ಮೇಲೆ ಕಂಪನಿಯಿಂದ ಮೌಲ್ಯಮಾಪನ ನಡೆಸಿ ಕೇಂದ್ರ ಪರಿಸರ ಇಲಾಖೆಗೆ ಸಂಸ್ಥೆಯು ವರದಿ ನೀಡಿತ್ತು. ವರದಿ ಸಲ್ಲಿಕೆ ಹಿನ್ನೆಲೆಯಲ್ಲಿ ಬಲ್ಡೊಟಾ ಕಾರ್ಖಾನೆ ಸ್ಥಾಪನೆಗೆ ಇದೀಗ ಕೇಂದ್ರ ಪರಿಸರ ಸಚಿವಾಲಯ ಅನುಮತಿ ನೀಡಿದೆ ಎಂದು ತಿಳಿದುಬಂದಿದೆ.
ಬಲ್ಡೋಟ ಕಂಪನಿಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಕೊಪ್ಪಳ ನಗರದ ಸಮೀಪವೇ ನಿರ್ಮಿಸಲು ಮುಂದಾಗಿತ್ತು. ಕಾರ್ಖಾನೆ ಸ್ಥಾಪನೆಯಿಂದ ನಗರದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಯು ಮಾಲಿನ್ಯ ಸಂಪೂರ್ಣ ಹದಿಗಡಲಿದೆ. ಈಗಾಗಿ ಕಾರ್ಖಾನೆ ಸ್ಥಾಪನೆ ವಿರೋಧಿಸಿ ಖುದ್ದು ಕೊಪ್ಪಳ ಗವಿಮಠದ ಗವೀಶ್ರೀ ಗಳು ಸಹ ಆತಂಕ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಕಾರ್ಖಾನೆ ವಿರುದ್ಧ ಹೋರಟದ ನೇತೃತ್ವವನ್ನು ವಹಿಸಿದ್ದರು. ಹೋರಾಟದಲ್ಲಿ ಕೊಪ್ಪಳ ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ,ಜನಾರ್ಧನ ರೆಡ್ಡಿ, ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಭಾಗವಹಿಸಿದ್ದರು.
ಕೊಪ್ಪಳ ಜನರ ಮನವಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನೇತೃತ್ವದ ಸಮಿತಿ ಸಿಎಂ ಸಿದ್ದರಾಮಯ್ಯ ಅವರ ಮುಂದಿಟ್ಟಿದ್ದರು. ಇನ್ನೂ ಮನವಿಯನ್ನು ಆಲಿಸಿದ ಸಿದ್ದು ಕೂಡಲೇ ಕಾರ್ಖಾನೆ ಸ್ಥಾಪನೆಗೆ ಕಾರ್ಯ ಸ್ಥಗಿತಗೊಳಿಸಲು ಫೋನ್ ನಲ್ಲಿಯೇ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರಿಗೆ ಆದೇಶ ಮಾಡಿದ್ದರು. ಅಲ್ಲಿಗೆ ಕಾರ್ಖಾನೆ ಸ್ಥಾಪನೆ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಆದರೆ ಇದೀಗ ಕೇಂದ್ರ ಪರಿಸರ ಇಲಾಖೆ ಕಾರ್ಖಾನೆ ಸ್ಥಾಪನೆಗೆ ಅನುಮತಿ ನೀಡಿದ್ದು ಹೋರಾಟಗಾರರನ್ನು ದಿಕ್ಕು ತಪ್ಪಿಸಿದೆ.