ಮಂಗಳೂರು : ಭೂಗತಪಾತಕಿ ಕಲಿ ಯೋಗೇಶ್ ಸಹಚರನನ್ನು ಸಿಸಿಬಿ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ಆರೋಪಿ ಅಬ್ದುಲ್ ಅಸಿರ್ ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಿಸುತ್ತಿದ ವೇಳೆ ಮಂಗಳೂರು ಸಿಸಿಬಿ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ.
ಮಂಗಳೂರು ಸಿಸಿಬಿ ಪೊಲೀಸರಿಂದ ಅಬ್ದುಲ್ ಅಸಿರ್ (32) ಬಂಧನವಾಗಿದೆ. ಅಬ್ದುಲ್ ಅಲಿಯಾಸ್ ಸದ್ದು ಅಲಿಯಾಸ್ ಸಾಧು ಅಲಿಯಾಸ್ ಮಾಯಾ ಎನ್ನುವ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಕಾಸರಗೋಡಿನಿಂದ ಮಂಗಳೂರಿಗೆ MDMA ತಂದು ಈತ ಮಾರಾಟ ಮಾಡುತ್ತಿದ್ದ. ನಂತೂರಿನಲ್ಲಿ ಎಂಡಿಎಂಎ ಮಾರುತಿದ್ದಾಗ ಸಿಸಿಬಿ ಪೊಲೀಸರಿಂದ ಬಂಧನವಾಗಿದೆ.
ಕೇರಳದ ಕಾಸರಗೋಡು ಜಿಲ್ಲೆಯ ನಾಂಗಿ ಕಡ್ದಪುರಂ ನಿವಾಸಿ ಅಬ್ದುಲ್ ಬಂಧನವಾಗಿದೆ. ಬಂಧಿತ ಅಬ್ದುಲ್ ನಿಂದ 5 ಲಕ್ಷ ರೂಪಾಯಿ ಮೌಲ್ಯದ 53 ಗ್ರಾಂ ಎಂಡಿಎಂಎ ಜಪ್ತಿ ಮಾಡಿಕೊಳ್ಳಲಾಗಿದ್ದು, ಭೂಗತ ಪಾತಕಿ ಕಲಿ ಯೋಗೆಶ ಪರವಾಗಿ ಅಬ್ದುಲ್ ಕೆಲಸ ಮಾಡುತ್ತಿದ್ದ. ಪುತ್ತೂರಿನ ಚಿನ್ನಾಭರಣ ಮಳಿಗೆಯ ಮೇಲೆ ಫೈರಿಂಗ್ ಪ್ರಕರಣದ ಆರೋಪಿ ಕೂಡ ಆಗಿದ್ದಾನೆ. ಅಬ್ದುಲ್ ವಿರುದ್ಧ ಕೊಲೆ, ಕಳ್ಳತನ ಅಲ್ಲದೆ ಪೋಕ್ಸೋ ಪ್ರಕರಣವಿದೆ.ಠಾಣೆಗೆ ನುಗ್ಗಿ ಪೊಲೀಸರ ವಾಹನಕ್ಕೆ ಅಬ್ದುಲ್ ಹಸಿರು ಬೆಂಕಿ ಹಚ್ಚಿದ್ದ.