ಕೇಪ್ ಟೌನ್ : ನಿರ್ಮಾಣ ಹಂತದ ದೇಗುಲ ಕುಸಿದು ಭಾರತೀಯ ಸೇರಿ ನಾಲ್ವರು ಸಾವನ್ನಪ್ಪಿರುವ ಘಟನೆ ದಕ್ಷಿಣ ಆಫ್ರಿಕಾದ ಇಥೆಕ್ವಿನಿಯ ಉತ್ತರದಲ್ಲಿರುವ ರೆಡ್‌ಕ್ಲಿಫ್‌ನಲ್ಲಿರುವ ಕಡಿದಾದ ಬೆಟ್ಟದಲ್ಲಿ ಈ ಘಟನೆ ಸಂಭವಿಸಿದ್ದು, ದೇಗುಲದ ವ್ಯವಸ್ಥಾಪಕ ವಿಕ್ಕಿ ಜೈರಾಜ್ ಪಾಂಡೆ (52) ಸೇರಿ ನಾಲ್ವರು ಸಾವನ್ನಪ್ಪಿದ್ದರೆ. 4 ಅಂತಸ್ತಿನ ಹಂತದ ಅಹೋಬಿಲಂ ದೇವಾಲಯ ಕುಸಿತವಾಗಿದೆ.
ಎರಡು ದಿನಗಳ ಹಿಂದೆ ದೇಗುಲ ಕುಸಿದು ಬಿದ್ದು ದುರಂತ ಸಂಭವಿಸಿತ್ತು. ಇನ್ನು ಅವಶೇಷಗಳ ಅಡಿ ಹಲವು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಹವಾಮಾನ ವೈಪ್ಯರೀತ್ಯದಿಂದ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದೆ. ದಕ್ಷಿಣ ಆಫ್ರಿಕಾದ ಕ್ವಾಜುಲು-ನಟಾಲ್ ಪ್ರಾಂತ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಅಂತಸ್ತಿನ ಹಿಂದೂ ದೇವಾಲಯ ಕುಸಿದು ನಾಲ್ವರು ಸಾವನ್ನಪ್ಪಿದ್ದಾರೆ.
ಮೃತಪಟ್ಟ ನಾಲ್ವರಲ್ಲಿ 52 ವರ್ಷದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಥೆಕ್ವಿನಿಯ ಉತ್ತರದಲ್ಲಿರುವ ರೆಡ್‌ಕ್ಲಿಫ್‌ನಲ್ಲಿರುವ ಕಡಿದಾದ ಬೆಟ್ಟದ ಮೇಲಿರುವ ನ್ಯೂ ಅಹೋಬಿಲಂ ಟೆಂಪಲ್ ಆಫ್ ಪ್ರೊಟೆಕ್ಷನ್ ದೇವಾಲಯದ ಕಟ್ಟಡದ ಕಾಮಗಾರಿ ನಡೆಯುತ್ತಿದ್ದಾಗ ಒಂದು ಭಾಗ ಕುಸಿದು ಬಿದ್ದಿದೆ. ಭಾರೀ ಪ್ರಮಾಣದ ಅವಶೇಷಗಳ ಅಡಿಯಲ್ಲಿ ಕಾರ್ಮಿಕರು ಸಿಲುಕಿದ್ದಾರೆ. ಅವಶೇಷಗಳ ಅಡಿ ಎಷ್ಟು ಜನ ಸಿಲುಕಿದ್ದಾರೆ ಎಂದು ನಿಖರ ಸಂಖ್ಯೆ ಇನ್ನೂ ತಿಳಿದು ಬಂದಿಲ್ಲ.








