ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಸೋಮವಾರ, ಉಕ್ರೇನ್ ರಷ್ಯಾದ ನವ್ಗೊರೊಡ್ ಪ್ರದೇಶದಲ್ಲಿರುವ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಿವಾಸದ ಮೇಲೆ ದಾಳಿ ಮಾಡಲು ಪ್ರಯತ್ನಿಸಿದೆ ಎಂದು ಹೇಳಿಕೊಂಡಿದ್ದಾರೆ. ಆ ಸಮಯದಲ್ಲಿ ಪುಟಿನ್ ನಿವಾಸದಲ್ಲಿದ್ದರೋ ಇಲ್ಲವೋ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.
ಇದನ್ನು “ರಾಜ್ಯ ಭಯೋತ್ಪಾದನೆಯ” ಕೃತ್ಯ ಎಂದು ಕರೆದ ರಷ್ಯಾದ ನಾಯಕ, ದಾಳಿಯಲ್ಲಿ ಒಟ್ಟು 91 ಡ್ರೋನ್’ಗಳು ಭಾಗಿಯಾಗಿವೆ ಎಂದು ಹೇಳಿಕೊಂಡಿದ್ದಾರೆ.
“ನವ್ಗೊರೊಡ್ ಪ್ರದೇಶದಲ್ಲಿ ರಷ್ಯಾದ ಅಧ್ಯಕ್ಷರ ನಿವಾಸದ ಮೇಲೆ ದಾಳಿ ಮಾಡಿದ ಎಲ್ಲಾ ಡ್ರೋನ್’ಗಳನ್ನು ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಗಳು ನಾಶಪಡಿಸಿವೆ” ಎಂದು ಲಾವ್ರೊವ್ ಹೇಳಿದ್ದಾರೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ.
ಪ್ರತೀಕಾರಕ್ಕೆ ಎಚ್ಚರಿಕೆ ನೀಡುತ್ತಾ, ಅಂತಹ ಕ್ರಮಗಳಿಗೆ ಉತ್ತರಿಸದೆ ಇರಲಾಗುವುದಿಲ್ಲ ಎಂದು ಲಾವ್ರೊವ್ ಹೇಳಿದರು.
“ಇಂತಹ ಅಜಾಗರೂಕ ಕ್ರಮಗಳಿಗೆ ಉತ್ತರಿಸದೆ ಇರಲಾಗುವುದಿಲ್ಲ” ಎಂದು ಅವರು ಹೇಳಿದರು, ಪ್ರತೀಕಾರದ ದಾಳಿಗಳಿಗೆ ಗುರಿಗಳು ಮತ್ತು ರಷ್ಯಾದ ಸಶಸ್ತ್ರ ಪಡೆಗಳಿಂದ ಅವುಗಳನ್ನು ಕಾರ್ಯಗತಗೊಳಿಸುವ ಸಮಯವನ್ನ ಈಗಾಗಲೇ ನಿರ್ಧರಿಸಲಾಗಿದೆ ಎಂದು ಹೇಳಿದರು.
ಆಪಾದಿತ ಘಟನೆಯು ಕೈವ್ ಜೊತೆಗಿನ ಯಾವುದೇ ಭವಿಷ್ಯದ ಮಾತುಕತೆಗಳಲ್ಲಿ ಮಾಸ್ಕೋದ ನಿಲುವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಲಾವ್ರೊವ್ ಹೇಳಿದ್ದಾರೆ ಎಂದು ಇಂಟರ್‌ಫ್ಯಾಕ್ಸ್ ಉಲ್ಲೇಖಿಸಿ ವರದಿಯಾಗಿದೆ.
ಕೋಗಿಲು ತ್ಯಾಜ್ಯ ವಿಲೇವಾರಿ ಜಾಗ ಒತ್ತುವರಿ ತೆರವು: ಮನೆ ಇಲ್ಲದ ಅರ್ಹರಿಗೆ ವಸತಿ ಯೋಜನೆಯಲ್ಲಿ ಮನೆ- ಡಿಕೆಶಿ
ನಿಮ್ಮ ಉಗುರುಗಳು ಬೆಳೆಯುವ ಮೊದ್ಲೇ ಮುರಿಯುತ್ತಿದ್ರೆ, ನಿಮ್ಮ ದೇಹದಲ್ಲಿ ಇವುಗಳ ಕೊರತೆಯಿದೆ ಎಂದರ್ಥ!








