ಬೀದರ್ : ಬೀದರ್ ನಲ್ಲಿ ಘೋರವಾದಂತಹ ದುರಂತ ನಡೆದಿದ್ದು, ಸ್ನೇಹಿತರ ಜೊತೆಗೆ ಬಾವಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಬೀದರ್ ಜಿಲ್ಲೆಯ ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ವಿಠಲಪುರದಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ.
ಹೌದು ಬಾವಿಯಲ್ಲಿ ಈಜಲು ಹೋಗಿದ್ದ ಇಬ್ಬರೂ ಯುವಕರು ನೀರು ಪಾಲಾಗಿದ್ದಾರೆ. ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ವಿಠಲಪುರದಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ವಿಠಲಪುರ ನಿವಾಸಿ ಆದಂತಹ ಪ್ರಶಾಂತ ಯಲಗುರ್ತಿ ಹಾಗೂ ಶಿವಾಜಿ ನೀರು ಪಾಲಾಗಿದ್ದಾರೆ ಎನ್ನಲಾಗಿದೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ದಾಸರವಾಡಿ ಗ್ರಾಮದ ನಿವಾಸಿ ಶಿವಾಜಿ ಹಾಗು ಪ್ರಶಾಂತ್ ನಿನ್ನೆ ಸ್ನೇಹಿತರ ಜೊತೆಗೆ ಈಜಲು ಹೋಗಿದ್ದಾಗ ಈ ಒಂದು ದುರಂತ ನಡೆದಿದೆ. ಘಟನೆ ಕುರಿತಂತೆ ಭೀಮನಖೇಡ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.