ವಿಜಯಪುರ : ಬೇಸಿಗೆ ಹಿನ್ನೆಲೆಯಲ್ಲಿ ಕೆರೆಯಲ್ಲಿ ಈಜಲು ತೆರಳಿದ್ದ ವೇಳೆ ತೆಪ್ಪ ಮುಗುಚಿ ಆರು ಜನರ ಪೈಕಿ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ವಿಜಯಪುರ ತಾಲೂಕಿನ ಕುಮಟಗಿ ಕೆರೆಯಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ.
ಮೊಹಮ್ಮದ್ ಕೈಫ್ ನಿಸಾರ್ ಜಮಾದಾರ್ (19) ಹಾಗೂ ಸೋಯಲ್ ಹತ್ತರಕಿಹಾಳ (25) ಎಂಬಿಬ್ಬರು ಮೃತಪಟ್ಟಿದ್ದಾರೆ. ಅಗ್ನಿಶಾಮಕದಳ, ಪೊಲೀಸರು ಹಾಗೂ ಸ್ಥಳೀಯ ಈಜುಗಾರರು ಸ್ಥಳಕ್ಕೆ ಬಂದು ಶೋಧ ನಡೆಸಿದ್ದರು. ಮೊಹಮ್ಮದ್ ಕೈಫ್ ನಿಸಾರ್ ಜಮಾದಾರ್ ಎಂಬವರನ್ನು ನೀರಿನಿಂದ ಹೊರತೆಗೆದು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇಂದು ಸೋಯಲ್ ಹತ್ತರಕಿಹಾಳ ಅವರ ಶವ ಸಿಕ್ಕಿದೆ.