ಕಲಬುರಗಿ : 2 ವರ್ಷದ ಮಗುವನ್ನು ಕೊಲೆ ಮಾಡಿ ತಾಯಿ ನೇಣಿಗೆ ಶರಣಾಗಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಮರಪಳ್ಳಿ ಗ್ರಾಮದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಎರಡು ವರ್ಷದ ಮಗುವನ್ನು ಕೊಂದು ತಾಯಿಯೊಬ್ಬಳು ತಾನು ಕೂಡ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ವರ್ಷಿತ(2) ಎನ್ನುವ ಮಗುವನ್ನು ತಾಯಿ ಶಿವಲೀಲಾ (23) ಕೊಂದು ನಂತರ ತಾನು ಕೂಡ ನೇಣಿಗೆ ಶರಣಾಗಿದ್ದಾಳೆ.
ಗಂಡ ಹಾಗೂ ಅತ್ತೆ ಕಿರುಕುಳದಿಂದ ಶಿವಲೀಲಾ ಇತ್ತೀಚಿಗೆ ತವರು ಮನೆ ಸೇರಿದ್ದಳು ಎಂದು ಹೇಳಲಾಗುತ್ತಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ಶಿವಲೀಲಾ ಗಂಡನ ಮನೆಗೆ ಬಂದಿದ್ದಳು. ಆತ್ಮಹತ್ಯೆ ಕುರಿತು ಪೊಲೀಸರು ಇದೀಗ ತನಿಖೆಯನ್ನು ಕೈಗೊಂಡಿದ್ದು, ಘಟನೆ ಕುರಿತಂತೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.