ಮಂಡ್ಯ : ಕಳೆದ ಕೆಲವು ಗಂಟೆಗಳ ಹಿಂದೆ ಲಾರಿ ಹಾಗೂ ಕಾರಿನ ಮಧ್ಯ ಭೀಕರ ಅಪಘಾತ ಸಂಭವಿಸಿ ಬೆಂಗಳೂರು ಮೂಲದ ಮೂರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದ ಘಟನೆ ಮಂಡ್ಯದಲ್ಲಿ ನಡೆದಿತ್ತು. ಇದೀಗ ಮತ್ತೊಂದು ಅಪಘಾತ ನಡೆದಿದ್ದು, ಲಾರಿ ಡಿಕ್ಕಿಯಾಗಿ ಬೈಕ್ ನಲ್ಲಿ ಇದ್ದ ಇಬ್ಬರೂ ಮಹಿಳೆಯರು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಹದೇಶ್ವರಪುರದಲ್ಲಿ ಈ ಒಂದು ಘಟನೆ ನಡೆದಿದೆ.
ಮೃತ ಮಹಿಳೆಯರನ್ನು ನೀಲನಹಳ್ಳಿ ಗ್ರಾಮದ ಶಿಲ್ಪ (35) ಸಂಧ್ಯಾ (19) ಎಂದು ತಿಳಿಬಂದಿದೆ. ಇನ್ನು ಘಟನೆಯಲ್ಲಿ ಮತ್ತೋರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು ಆಕೆಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಶಿಲ್ಪಾ ಮತ್ತು ಸಂಧ್ಯಾ ಆಂಧ್ರಪ್ರದೇಶದ ತಿರುಪತಿಗೆ ತೆರಳುತ್ತಿದ್ದರು ಎನ್ನಲಾಗಿದೆ.
ಬಸ್ ನಿಲ್ದಾಣದವರೆಗೆ ಗೆಳತಿ ಶೈಲಜಾ ಡ್ರಾಪ್ ನೀಡುತ್ತಿದ್ದಾಗ ಈ ಒಂದು ಘಟನೆ ನಡೆದಿದೆ. ಲಾರಿ ಡಿಕ್ಕಿಯಾಗಿ ಬೈಕಿನಲ್ಲಿ ಚಲಿಸುತ್ತಿದ್ದ ಶಿಲ್ಪ ಹಾಗೂ ಸಂಧ್ಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಗಂಭೀರವಾಗಿ ಗಾಯಕೊಂಡ ಶೈಲಜಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಘಟನೆ ಬಳಿಕ ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ. ಘಟನೆ ಕುರಿತಂತೆ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.