ಕಲಬುರ್ಗಿ : ಕಲ್ಬುರ್ಗಿಯಲ್ಲಿ ಭೀಕರವಾಗಿ ಡಬಲ್ ಮರ್ಡರ್ ನಡೆದಿದ್ದು, ಹಾಡು ಹಗಲೇ ಮಹಿಳೆಯರಿಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ನಗರದ ತಾವರಗೇರ ಕ್ರಾಸ್ ಬಳಿ ಮಹಿಳೆಯರಿಬ್ಬರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆಗೈಯಲಾಗಿದೆ. ಕಲ್ಬುರ್ಗಿಯ ಜನತೆ ಘಟನೆ ಯಿಂದ ಬೆಚ್ಚಿಬಿದ್ದಿದೆ.
ಹೌದು ಕಲಬುರ್ಗಿಯ ತಾವರಗೆರಾ ಕ್ರಾಸ್ ಬಳಿ ಹಾಡು ಹಗಲೇ ಡಬಲ್ ಮರ್ಡರ್ ಆಗಿರುವ ಘಟನೆ ನಡೆದಿದೆ. ಕಲ್ಲು ಎತ್ತಿ ಹಾಕಿ ಇಬ್ಬರು ಮಹಿಳೆಯರ ಬರ್ಬರ ಕೊಲೆಯಾಗಿದೆ.ಕೂಲಿ ಕೆಲಸಕ್ಕೆ ಎಂದು ಹೋಗಿದ್ದ ಮಹಿಳೆಯರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.
ಶರಣಮ್ಮ (51) ಚಂದಮ್ಮ (53) ಬರ್ಬರವಾಗಿ ಕೊಲೆಯಾಗಿರುವ ಮಹಿಳೆಯರು ಎಂದು ಹೇಳಲಾಗುತ್ತಿದೆ.ಘಟನೆ ಕುರಿತಂತೆ ಕಲ್ಬುರ್ಗಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಕೊಲೆ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದರೆ ಎಂದು ತಿಳಿದುಬಂದಿದೆ.