ಬೆಂಗಳೂರು : ಬೆಂಗಳೂರಿನಲ್ಲಿ ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ. ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿ ತನಿಷ್ಕ ಮತ್ತು ಪ್ರಥಮ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿ ತೇಜಸ್ವಿನಿ ನಾಪತ್ತೆಯಾಗಿದ್ದಾರೆ.
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಮನೆ ಬಿಟ್ಟು ಹೋದರ ಎನ್ನುವ ಅನುಮಾನ ಶುರುವಾಗಿದೆ. ಒಂದು ತಿಂಗಳಿನಿಂದ ಪೊಲೀಸರು ಮತ್ತು ಪೋಷಕರು ಹುಡುಕಾಡುತ್ತಿದ್ದಾರೆ. ಮನೆಯಲ್ಲಿಯೇ ಇಬ್ಬರು ಯುವತಿಯರು ಮೊಬೈಲ್ ಬಿಟ್ಟು ನಾಪತ್ತೆಯಾಗಿದ್ದಾರೆ. ಎಟಿಎಂ ಸೇರಿದಂತೆ ಏನನ್ನು ಕೂಡ ಇವತಿರು ಕೊಂಡು ಹೋಗಿಲ್ಲ ಆಧಾರ್ ಕಾರ್ಡ್ ಕಾಲೇಜು ಬ್ಯಾಗು ಜೊತೆ ಇಬ್ಬರು ನಾಪತ್ತೆಯಾಗಿದ್ದಾರೆ.
ಜನವರಿ 31ರಂದು ಇಬ್ಬರು ವಿದ್ಯಾರ್ಥಿನಿಯರು ಕಾಣೆಯಾಗಿದ್ದಾರೆ. ಈ ಬಗ್ಗೆ ಕೂಡಲೇ ಪೋಷಕರು ವಿಚಾರಣೆಗೆ ದೂರು ನೀಡಿದ್ದಾರೆ ಕಳೆದ ವರ್ಷ ತಪ್ಪಿಸಿಕೊಳ್ಳಲು ಯುವತಿ ಕೈ ಕುಯ್ದುಕೊಂಡಿದ್ದಳು. ಈ ವರ್ಷ ಪರೀಕ್ಷೆ ಸಮೀಪಿಸುತ್ತಿದಂತೆ ಕಿರಿಯ ವಿಧ್ಯಾರ್ಥಿನಿ ಜೊತೆಗೆ ಕಾಣೆಯಾಗಿದ್ದಾರೆ.








